ವಾಲ್ಮಿಕಿ ಸಮಾಜದಿಂದ ಶಾಸಕರು, ಸಚಿವರು, ಪರಿಷತ್ ಸದಸ್ಯರಿಗೆ ಅಭಿನಂದನಾ ಸಮಾರಂಭ: ಪುರುಷೋತ್ತಮ್

ಮಧುಗಿರಿ: ಜಿಲ್ಲಾ ವಾಲ್ಮೀಕಿ ಸಮಾಜದ ವತಿಯಿಂದ ನೂತನ ಸಚಿವರು , ಶಾಸಕರು , ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಸಮಾಜದ ಜಿಲ್ಲಾ ಅಧ್ಯಕ್ಷ ಪುರುಷೋತ್ತಮ್ ತಿಳಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಭಿನಂದನಾ ಸಮಾರಂಭದ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿ ನಂತರ ಮಾತನಾಡಿದ ಅವರು ತುಮಕೂರಿನ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಬೃಹತ್ ಅಭಿನಂದನಾ ಸಮಾರಂಭವನ್ನು ಶ್ರೀ ವಾಲ್ಮೀಕಿ ಪ್ರಸನ್ನಾಂದ ಪುರಿ ಸ್ವಾಮೀಜಿ , ಶಿಡ್ಲೇಕೋಣದ ಶ್ರೀ ಸಂಜಯ್ ಕುಮಾರ ಸ್ವಾಮೀಜಿ ಯವರ ದಿವ್ಯ ಸಾನಿಧ್ಯದೊಂದಿಗೆ ಜೂ.25 ರ ಭಾನುವಾರ ಬೆಳಗ್ಗೆ 10:30 ಘಂಟೆಗೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ರಾಜ್ಯದ ವಾಲ್ಮೀಕಿ ಸಮುದಾಯದ ನೂತನ ಸಚಿವರು , ಶಾಸಕರು , ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರನ್ನು ಜಿಲ್ಲಾ ಸಂಘ ಹಾಗೂ ನಾಯಕ ಸಂಘಟನೆ ಮತ್ತು ಸಂಸ್ಥೆ ಗಳ ವತಿಯಿಂದ ಅಭಿನಂದಿಸಲಾಗುತ್ತಿದ್ದು , ಜಿಲ್ಲೆಯ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿರುವ ಮುಖಂಡರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಅಂದೂ ಜಿಲ್ಲೆಯ ಸಮಸ್ತ ವಾಲ್ಮೀಕಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯ ಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದರು.

ತಾಲೂಕು ಅಧ್ಯಕ್ಷ ರಂಗಶ್ಯಾಮಣ್ಣ ಮಾತನಾಡಿ ಜೂನ್ 25 ರ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಕೆ.ಎನ್.ರಾಜಣ್ಣ ಸ್ವ ಗೃಹದಲ್ಲಿ ಪೂರ್ವ ಸಭೆಯನ್ನು ಗುರುವಾರ ಬೆ.11:00 ಗಂಟೆಗೆ ಜಿ.ಪಂ ಮಾಜಿ ಸದಸ್ಯೆ ಶಾಂತಲಾರಾಜಣ್ಣ ನವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಮಾಜದವರು ಆಗಮಿಸಿ ತಮ್ಮ ಅಭಿಪ್ರಾಯ ಸಲಹೆಗಳನ್ನು ವ್ಯಕ್ತಪಡಿಸುವಂತೆ ತಿಳಿಸಿದರು.

ಮುಖಂಡರಾದ ಗುಬ್ಬಿ ನಾಗರಾಜು , ಆಂಜನೇಯಲು , ಹನುಮಂತರಾಯಪ್ಪ , ಜಿ.ಎಸ್.ಜಗದೀಶ್ ಕುಮಾರ್ , ಶಂಕರನಾರಾಯಣಬಾಬು , ಬೆಸ್ಕಾಂ ನಿವೃತ್ತ ಅಧಿಕಾರಿ ಮುದ್ದುಕೃಷ್ಣ , ದೊಡ್ಡೇರಿ ಶಿವಣ್ಣ , ರಂಜಿತ್ , ನಾರಾಯಣಪ್ಪ , ಚಂದ್ರಮ್ಮ ಹಾಗೂ ಮತ್ತಿತರರು ಇದ್ದರು.

Related posts

Leave a Comment