ಲೋಕಾ ದಾಳಿ ವೇಳೆ ಅಧಿಕಾರಿ ಮನೆಯಲ್ಲಿ ಹೈಫೈ ಎಣ್ಣೆ ಬಾಟಲಿ ಪತ್ತೆ, ಐಷಾರಾಮಿ ಕಾರುಗಳ ಒಡೆಯ ಈ ಅಧಿಕಾರಿ

ಬೆಂಗಳೂರು: ಈ ಹಿಂದದೆ ಕೆ.ಆರ್ ಪುರಂ (K R Puram) ತಹಸಿಲ್ದಾರ್ (Tahasildar) ಆಗಿದ್ದ ಅಜೀತ್‌ ರೈ (Ajith Rai) ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅಕ್ರಮ ಹಣ ಗಳಿಕೆ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆ.ಆರ್ ಪುರಂ ನಲ್ಲಿರು ಮನೆ ಸೇರಿದಂತೆ ತಹಸಿಲ್ದಾರ್‌ಗೆ ಸೇರಿದ ನಗರದ ಹತ್ತು ಕಡೆ 20 ಕ್ಕು ಹೆಚ್ಚು ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ.

ತಹಶಿಲ್ದಾರ್ ಮನೆಯಲ್ಲಿ ಹತ್ತು ಲಕ್ಷಕ್ಕು ಹೆಚ್ಚು ಹಣ ಸಿಕ್ಕಿದೆ ಎನ್ನುವ ಮಾಹಿತಿ ಲಭಿಸಿದ್ದು ಸದ್ಯ ಅಜಿತ್ ರೈ ಮನೆಯಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳಿಂದ ಫುಲ್ ಡ್ರಿಲ್ ನಡೆಯುತ್ತಿದೆ, ಹಣ ಸೇರಿದಂತೆ ಅನೇಕ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಕೆ ಆರ್ ಪುರಂ ತಹಶಿಲ್ದಾರ ಅಜಿತ್ ರೈ ಇದ್ದ ವೇಳೆ ಸಾಕಷ್ಟು ಆಕ್ರಮ ಆಸ್ತಿ ಗಲಿಸರುವ ಆರೋಪ. ಕೆ ಆರ್ ಪುರಂ ನಲ್ಲಿ ರಿಯಲ್ ಎಸ್ಟೇಟ್ ಎತೆಚ್ಚಾವಾಗಿ ನಡೆಯುತ್ತಿದ್ದ ವೇಳೆ ತಹಶಿಲ್ದಾರ್ ಅಗಿದ್ದ ಅಜಿತ್ ರೈ. ಈ ವೇಳೆ ಬಿಲ್ಡರ್ ಗಳಿಂದ ಆಕ್ರಮ ಹಣ ಪಡೆದಿರುವ ಆರೋಪ, ರಾಜಕಾಲುವೆ ಒತ್ತುವರಿ ಸಮಯದಲ್ಲಿ‌ ಬಿಲ್ಡರ್ ಗಳ ಆಸ್ತಿ‌ ಬಿಟ್ಟು ಬೇರೆ ಕಡೆ ತೆರುವು ಆರೋಪ, ಆದಾಯಕ್ಕೂ ಮೀರಿ ಆಸ್ತಿ‌ಮಾಡಿರುವ ಅಜಿತ್ ರೈ, ಕೆ ಆರ್ ಪುರಂ ತಹಶಿಲ್ದಾರ್ ಅಗಿದ್ದ ವೇಳೆ ಬೆಂಗಳೂರು ನಲ್ಲಿ ಐಷಾರಾಮಿ ‌ಮನೆ ಖರಿದೀ, ಐಷಾರಾಮಿ ಕಾರ್ ಗಳನ್ನು ಹೊಂದಿರು ಅಜಿತ್ ರೈ, ರಾಜ್ಯಾದ್ಯಂತ ಆಸ್ತಿ ಪಾಸ್ತಿ ಹೊಂದಿರು ಆರೋಪದ ಮೇಲೆ ಲೋಕಯುಕ್ತ ದಾಳಿ, ಕಳೆದ ಕೆಲ ದಿನಗಳಿಂದ ಕೆ ಆರ್ ಪುರಂ ನಿಂದ ವರ್ಗಾವಣೆಗೊಂಡಿದ್ದ ಅಜಿತ್ ರೈ, ಸದ್ಯ ವರ್ಗಾವಣೆ ನಂತರ ಎಲ್ಲೂ ಸ್ಥಳ ತೊರಿಸದ ಸರ್ಕಾರ

501ನೇ ಫ್ಲಾಟ್ ನಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು, ಬೆಳಗ್ಗೆ 6 ರಿಂದಲೂ ಲೋಕಾಯುಕ್ತ ಅಧಿಕಾರಿಗಳ ಶೋಧ ಕಾರ್ಯ, ಚಂದ್ರಾಲೇಔಟ್ ಅಜಿತ್ ರೈ ನಿವಾಸಕ್ಕೆ ಹಣ ಎಣಿಸೋ ಯಂತ್ರ ತೆಗೆದುಕೊಂಡು ಹೋಗಿರುವ ಲೋಕಾ ಅಧಿಕಾರಿಗಳು, ಅಜಿತ್ ರೈ ಫ್ಲಾಟ್ ನಲ್ಲಿ ಸಿಕ್ಕಿರುವ ಹಣ, ಹಣ ಲೆಕ್ಕ ಹಾಕಲು ಎಣಿಸುವ ಯಂತ್ರ ತಂದಿರುವ ಲೋಕಾಯುಕ್ತ, ಚಂದ್ರಾಲೇಔಟ್ ನ ಸ್ಲೈ ಲೈನ್ ಅಪಾರ್ಟ್ಮೆಂಟ್ ನಲ್ಲಿರುವ ಅಜಿತ್ ರೈ ಫ್ಲಾಟ್ಅ, ಜಿತ್ ರೈ ಫ್ಲಾಟ್ ಮೇಲೆ ದಾಳಿ ನಡೆಸಿ ಲೋಕಾ ಪರಿಶೀಲನೆ. ಸಹಕಾರ ನಗರದ ಅಜೀತ್ ರೈ ಮನೆಯಲ್ಲಿ ಹೈಪೈ ಲಿಕ್ಕರ್ ಬಾಟಲ್ ಗಳ ಪತ್ತೆ

ಲೋಕಾಯುಕ್ತ ಡಿವೈಎಸ್ಪಿ ಪ್ರಮೋದ್ ನೇತೃತ್ವದಲ್ಲಿ ಅಜಿತ್ ರೈ ಮನೆ ಮೇಲೆ ದಾಳಿ, ನಾಲ್ಕು ಕಾರುಗಳಲ್ಲಿ ಬಂದಿರೋ ಅಧಿಕಾರಿಗಳು, ಸುಮಾರು 15 ಕ್ಕೂ ಹೆಚ್ಚು ಅಧಿಕಾರಿಗಳಿಂದ ಮನೆ ಪರಿಶೀಲನೆ, ಸಹಕಾರ ನಗರದಲ್ಲಿರುವ ಮನೆಯಲ್ಲಿ ಆಸ್ತಿ ಪತ್ರ ದಾಖಲೆ ಪರಿಶೀಲನೆ, ಬೆಳಗಿನ ಜಾವ 4.30 ಕ್ಕೆ ಬಂದು ದಾಳಿ ಮಾಡಿದ್ದ ಅಧಿಕಾರಿಗಳು, ಅಜಿತ್ ರೈ ವಾಕಿಂಗ್ ಹೋಗುವ ಮುನ್ನ ಲೋಕಾ ದಾಳಿ ಮಾಡಿದ್ದ ಅಧಿಕಾರಿಗಳು, ಅಜಿತ್ ರೈ ವಾಕಿಂಗ್ ಹೋಗಿದ್ರೆ, ತಪ್ಪಿಸಿಕೊಳ್ಳುವ ಸಾಧ್ಯತೆ ಇತ್ತು. ಆದಾಯಕ್ಕೆ ಮೀರಿದ ಆಸ್ತಿಗಳಿಸಿರುವ ತಹಸೀಲ್ದಾರ್ ಅಜಿತ್ ರೈ, ಸದ್ಯ ಸಹಕಾರ ನಗರದ ಮನೆಯಲ್ಲಿರುವ ಅಜಿತ್ ರೈ ಲೋಕಾ ಡಿವೈಎಸ್ಪಿ ಪ್ರಮೋದ್ ಹಾಗೂ ಅಧಿಕಾರಿಗಳಿಂದ ಅಜಿತ್ ರೈ ವಿಚಾರಣೆ .

Related posts

Leave a Comment