ಲೋಕಾಯುಕ್ತ ಬಲೆಗೆ ಬಿದ್ದ ಎಸ್ಕಾಂ ಅಧಿಕಾರಿಗಳು: ರೈತ ಬೋರ್‌ವೆಲ್‌ಗೆ ವಿದ್ಯುತ್ ಅಳವಡಿಸಲು ಲಂಚಕ್ಕೆ ಬೇಡಿಕೆ ಆರೋಪ

ಬಾಗಲಕೋಟೆ: ರೈತರ ಹೊಲದಲ್ಲಿ ಬೋರ್ವೆಲ್ ಗಾಗಿ ವಿದ್ಯುತ್ ಟ್ರಾನ್ಸಫಾರ್ಮರ್ ಹಾಗೂ ವಿದ್ಯುತ್  ಕಂಬ ಅಳವಡಿಸುವ ವಿಚಾರಕ್ಕೆ  ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಎಸ್ಕಾಂ ಅಧಿಕಾರಿಗಳು ಲೋಕಾಯುಕ್ತ‌ ಬಲೆಗೆ ಬಿದ್ದಿದ್ದಾರೆ.  ಹೆಸ್ಕಾಮ್ ಸೆಕ್ಷನ್ ಆಫಿಸರ್ ಹಾಗೂ ಬಿಲ್‌ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.

ಈ ಇಬ್ಬರು ಅಧಿಕಾರಿಗಳು ರೈತರ ಜಮೀನಿಗೆ ಟ್ರಾನ್ಪಾರ್ಮರ್ ಕೂರಿಸಲು, ವಿದ್ಯುತ್ ಕಂಬ ಅಳವಡಿಸಲು‌ 20 ಸಾವಿರ ಬೇಡಿಕೆ  ಇಟ್ಟಿದ್ದರು ಎನ್ನಲಾಗುತ್ತಿದೆ, ಹೆಸ್ಕಾಂ ಸೆಕ್ಷನ್ ಆಫೀಸರ್ ಮಲ್ಲಿಕಾರ್ಜುನ ಡೊಮನಾಳ ಹಾಗೂ ಬಿಲ್ ಕಲೆಕ್ಟರ್ ಶಿವಲಿಂಗ ಕನಾಳ ಇವರಿಬ್ಬರು ಜಮಖಂಡಿ ತಾಲೂಕು ತುಂಗಾಳ ಗ್ರಾಮದ ರೈತ ಮಹಿಳೆ ತಂಗೆವ್ವ ಹಿಟ್ನಾಳ್ ಎಂಬುವರಿಂದ ಲಂಚಕ್ಕೆ ಬೇಡಿಕೆ‌ ಇಟ್ಟಿದ್ದರು ಎನ್ನಲಾಗುತ್ತಿದೆ.

ಬೇಡಿಕೆ ಇಟ್ಟಿದ್ದ ಲಂಚದ ಹಣದ ಪಾಲಾಗಿ 10 ಸಾವಿರ ರುಪಾಯಿಯನ್ನ ಬಿಲ್ ಕಲೆಕ್ಟರ್ ಶಿವಲಿಂಗ ಕನಾಳ ಪಡೆಯುವ ವೇಳೆ ಲೋಕಾಯುಕ್ತ ಎಸ್ಪಿ ಅನಿತಾ ಹಗ್ಗಣ್ಣವರ ನೇತೃತ್ವದಲ್ಲಿ ಸಾವಳಗಿ ಹೆಸ್ಕಾಂ ಕಚೇರಿಯಲ್ಲಿ ದಾಳಿ ನಡೆಸಲಾಗಿದೆ.

Related posts

Leave a Comment