ಲೋಕಾಯುಕ್ತ ಬಲೆಗೆ ಬಿದ್ದಿದ್ದ ಅಧಿಕಾರಿಗಳು ನ್ಯಾಯಾಂಗ ಬಂಧಕ್ಕೆ

ಚಾಮರಾಜನಗರ: ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಇಂಜಿನಿಯರ್‌ಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚಾಮರಾಜನಗರ ಪಿಡಬ್ಲ್ಯುಡಿ ಎಇಇ ಕೆಂಪರಾಜು, ಎಇ ಮಧುಸೂದನ್ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದ ಅಧಿಕಾರಿಗಳು.

ಇಂದು ಜಿಲ್ಲಾ ನ್ಯಾಯಾಧೀಶರ ನಿವಾಸಕ್ಕೆ ಆರೋಪಿಗಳನ್ನು ಹಾಜರುಪಡಿಸಿದ ಲೋಕಾಯುಕ್ತ ಪೊಲೀಸರು, ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನ ನ್ಯಾಯಾಧೀಶರಾದ ಭಾರತಿ ಆದೇಶ ನೀಡಿದ್ದಾರೆ.

ಚಾಮರಾಜನಗರ ತಾಲೂಕು ಕುದೇರು ಗ್ರಾಮದ ಬಳಿ ಶಾಲಾ ಕಟ್ಟಡದ ಹಣ ಬಿಡುಗಡೆಗೆ ಗುತ್ತಿಗೆದಾರನಿಂದ 30 ಸಾವಿರ ರೂ. ಲಂಚ ಸ್ವೀಕಾರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಅಧಿಕಾರಿಗಳು ಬಿದ್ದಿದ್ದರು.

Related posts

Leave a Comment