ರಾಜ್ಯ ಸರ್ಕಾರದ 11 ಮಂದಿ ಅಧಿಕಾರಿಗಳು ಏಕಕಾಲದಲ್ಲಿ ಸಸ್ಪೆಂಟ್, ಪಟ್ಟಿಯಲ್ಲಿ ನಿಮ್ಮೂರಿನವರು ಇದ್ದಾರ ನೋಡಿ

ಬೆಂಗಳೂರು: ಅಕ್ರಮ ಆರೋಪ ಹೊತ್ತಿ‌ದ್ದ 11 ಜನ ಸರ್ಕಾರಿ ಅಧಿಕಾರಿಗಳನ್ನ ಕಾಂಗ್ರೆಸ್ ಸರ್ಕಾರ (Congress Govt) ಅಧಿಕಾರಕ್ಕೆ ಬರುತ್ತಿದ್ದಂತೆ ಅಮಾನತ್ತು (SUSPEND) ಮಾಡುವಂತೆ ಆದೇಶ ಹೊರಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಆರ್ ಆರ್ ನಗರ (RR NAGARA) ವ್ಯಾಪ್ತಿಯಲ್ಲಿ ಭಾರಿ ಅಕ್ರಮ ಆರೋಪ ಕೇಳಿಬಂದಿತ್ತು, ಈ ಬಗ್ಗೆ ಸಂಸದ ಡಿಕೆ ಸುರೇಶ್ (D K Suresh) ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದರು, ಈ ಹಿನ್ನೆಲೆಯಲ್ಲಿ ಟಿವಿಸಿಸಿ (TVCC) ವಿಭಾಗದ ಮುಖ್ಯ ಇಂಜಿನಿಯರ್ (CHIEF ENGINEER) ದೊಡ್ಡಯ್ಯ ಸೇರಿ 11 ಮಂದಿ ಅಮಾನತು

ಆರೋಪ: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಹಣದಲ್ಲಿ ಕಾಮಗಾರಿ ನಡೆಸದೇ ಸರಿಸುಮಾರು 250 ಕೋಟಿ ಅಕ್ರಮದ ಬಗ್ಗೆ ಸಂಸದ ಡಿಕೆ ಸುರೇಶ್ ದೂರು ನೀಡಿದ್ದ ಹಿನ್ನಲೆ  11 ಮಂದಿಯನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಅಮಾನತ್ತು ಆದೇಶ ಪ್ರತಿ ಪುಟ ಸಂಖ್ಯೆ 1
ಅಮಾನತ್ತು ಆದೇಶ ಪ್ರತಿ ಪುಟ ಸಂಖ್ಯೆ 1

ಅಮಾನತ್ತಾದ ಅಧಿಕಾರಿಗಳು:
1) ದೊಡ್ಡಯ್ಯ, ಮುಖ್ಯ ಇಂಜಿನಿಯರ್ ಟಿವಿಸಿಸಿ ವಿಭಾಗ
2) ಸತೀಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಟಿವಿಸಿಸಿ ವಿಭಾಗ
3) ವಿಜಯ್ ಕುಮಾರ್, ಮುಖ್ಯ ಇಂಜಿನಿಯರ್ ರಾಜರಾಜೇಶ್ವರಿ ನಗರ ವಲಯ
4) ಶಿಲ್ಪಾ, ಸಹಾಯಕ ಇಂಜಿನಿಯರ್, ರಾಜರಾಜೇಶ್ವರಿ ನಗರ ವಲಯ
5) ಮೋಹನ್ ಮುಖ್ಯ ಇಂಜಿನಿಯರ್, ಯೋಜನಾ ವಿಭಾಗ RR ನಗರ ವಲಯ
6) ಭಾರತಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಯೋಜನಾ ವಿಭಾಗ RR ನಗರ ವಲಯ
7) ಬಸವರಾಜ್, ಕಾರ್ಯಪಾಲಕ ಇಂಜಿನಿಯರ್ RR ನಗರ ಉಪ ವಲಯ
8) ಸಿದ್ದಯ್ಯ, ಸಹಾಯಕ ಇಂಜಿನಿಯರ್, ವಾರ್ಡ್ 129 ಮತ್ತು 160
9) ಉಮೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲಗ್ಗೆರೆ
10) ಅನಿತಾ, ಸೂಪರಿಂಟೆಂಡೆಂಟ್, ಕ್ಯಾರಿಯರ್, RR ನಗರ ವಲಯ
11) ಗೂಳಿಗೌಡ, ಡೆಪ್ಯುಟಿ ಮ್ಯಾನೇಜರ್ RR ನಗರ ವಲಯ

11 ಮಂದಿ ಅಧಿಕಾರಿಗಳನ್ನ ಅಮಾನತುಗೊಳಿಸಿರುವ ಆದೇಶವನ್ನ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಹೊರಡಿಸಲಾಗಿದೆ.

Related posts

Leave a Comment