ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ: ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ಆಸ್ತಿ ನೋಡಿ

ಬೆಂಗಳೂರು (ಜೂ 1): ರಾಜ್ಯದಲ್ಲಿ 15 ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನೆನ್ನೆ ಲೋಕಯುಕ್ತ ದಾಳಿ ನಡೆಸಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಾಮರಾಜನರ, ತುಮಕೂರು, ಕೊಪ್ಪಳ, ಮಂಗಳೂರು, ಹಾವೇರಿ, ಉಡುಪಿಯಲ್ಲಿ ದಾಳಿ ನಡೆದಿದೆ. ನಿನ್ನೆ ಏಕಕಾಲದಲ್ಲಿ ರಾಜ್ಯದ ಒಟ್ಟು 57 ಕಡೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ನೆನ್ನೆ ಯಾವ್ಯಾವ ಅಧಿಕಾರಿಗಳ ಮೇಲೆ ದಾಳಿ ನಡೆಯಿತು, ಅದರಲ್ಲಿ ಯಾವ್ಯಾವ ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ಆಸ್ತಿ ಮೌಲ್ಯ ಎಷ್ಟು ಅಂತಾ ಈ ಕೆಳಗೆ ನೀಡಲಾಗಿದೆ.

1) ಎಚ್.ಜೆ. ರಮೇಶ್, ಚೀಫ್ ಇಂಜಿನಿಯರ್ ಬೆಸ್ಕಾಂ. ರಮೇಶ್ ಗೆ ಸೇರಿದ ನಾಲ್ಕು ಕಡೆ ದಾಳಿ, ಒಟ್ಟು 5.6ಕೋಟಿ ಮೌಲ್ಯದ ಆಸ್ತಿ ಪತ್ತೆ

2) ಟಿ.ಬಿ. ನಾರಾಯಣಪ್ಪ, ಡೆಪ್ಯೂಟಿ ಡೈರೆಕ್ಟರ್ ಆಫ್ ಫ್ಯಾಕ್ಟರೀಸ್, ಕಾರ್ಮಿಕ ಭವನ, ನಾರಾಯಣಪ್ಪಗೆ ಸೇರಿದ ೧೦ ಸ್ಥಳಗಳಲ್ಲಿ ದಾಳಿ
ನಾರಾಯಣಪ್ಪಗೆ ಸೇರಿದ ಒಟ್ಟು ೨.೫ ಕೋಟಿಯಷ್ಟು ಆಸ್ತಿ ಪತ್ತೆ

3) ಎಸ್ ಡಿ ರಂಗಸ್ವಾಮಿ, ಸೆಕ್ರೇಟರಿ, ಕಿತ್ತನಹಳ್ಳಿ ಗ್ರಾಮಪಂಚಾಯಿತಿ
ರಂಗಸ್ವಾಮಿಗೆ ಸೇರಿದ ಮೂರು ಕಡೆ ದಾಳಿ, ರಂಗಸ್ವಾಮಿಗೆ ಸೇರಿದ 2.5 ಕೋಟಿ ಆಸ್ತಿ ಪತ್ತೆ.

4) ಎನ್ ಜಿ ಪ್ರಮೋದ್ ಕುಮಾರ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಬಿಬಿಎಂಪಿ, ಪ್ರಮೋದ್ ಗೆ ಸೇರಿದ ೫ ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ, ಒಟ್ಟು 8 ಕೋಟಿ ಮೌಲ್ಯದ ಆಸ್ತಿ ಪತ್ತೆ

5) ಎನ್ ಮುತ್ತು, ಚೀಫ್ ಅಕೌಂಟ್ ಆಫೀಸರ್, MUDA
ಮುತ್ತುಗೆ ಸಂಬಂಧಿಸಿದ ಮೂರು ಕಡೆ ದಾಳಿ ನಡೆಸಿದ್ದ ಅಧಿಕಾರಿಗಳು
ದಾಳಿಯಲ್ಲಿ 2.70 ಕೋಟಿ ಮೌಲ್ಯದ ಆಸ್ತಿ ಪತ್ತೆ

6) ಜೆ ಮಹೇಶ್, ಸೂಪರಿಡೆಂಟ್ ಇಂಜಿನಿಯರ್, ಡೆಪ್ಯೂಟಿ ಕಮಿಷನರ್ ಆಫೀಸ್, ಮೈಸೂರು, ಮಹೇಶ್ ಗೆ ಸಂಬಂಧಿಸಿದಂತೆ ಮೂರು ಕಡೆ ದಾಳಿ, 2.5 ಕೋಟಿ ಮೌಲ್ಯದ ಆಸ್ತಿ ಪತ್ತೆ

7) ಎ ಎನ್ ನಾಗೇಶ್, ಎಇಇ MUDA
ನಾಗೇಶ್ ಗೆ ಸಂಬಂಧಿಸಿದಂತೆ ಮೂರು ಕಡೆ ದಾಳಿ.. 2.30 ಕೋಟಿ ಆಸ್ತಿ ಪತ್ತೆ

8) ಎನ್ ಶಂಕರ್ ಮೂರ್ತಿ, ಸೀನಿಯರ್ ಸಬ್ ರಿಜಿಸ್ಟರ್, ನಂಜನಗೂಡು, ಶಂಕರ್ ಗೆ ಸಂಬಂಧಿಸಿದಂತೆ ಮೂರು ಕಡೆ ಲೋಕಾ ದಾಳಿ, ಒಟ್ಟು 2.63 ಕೋಟಿ ಆಸ್ತಿ ಪತ್ತೆ

9) ಶಂಕರ್ ನಾಯಕ್, ಜ್ಯೂನಿಯರ್ ಇಂಜಿನಿಯರ್, ಆರ್ ಡಿ ಪಿಆರ್, ಶಿಕಾರಿಪುರ, ಲೋಕಾಯುಕ್ತ ಅಧಿಕಾರಿಗಳಿಂದ ಮುಂದುವರೆದ ದಾಳಿ

10) ಕೆ ಪ್ರಶಾಂತ್, ಸೂಪರಿಡೆಂಟ್ ನೀರಾವರಿ ನಿಗಮ, ಶಿವಮೊಗ್ಗ
ಪ್ರಶಾಂತ್ ಗೆ ಸಂಬಂಧಿಸಿದಂತೆ ಐದು ಕಡೆ ದಾಳಿ, 3.20 ಕೋಟಿ ಮೌಲ್ಯದ ಆಸ್ತಿ ಪತ್ತೆ

11) ಡಿಆರ್ ಕುಮಾರ್, ಲೇಬರ್ ಆಫೀಸರ್ ಮಣಿಪಾಲ್
ಕುಮಾರ್ ಗೆ ಸಂಬಂಧಿಸಿದಂತೆ ಎರಡು ಕಡೆ ಲೊಕಾ ದಾಳಿ, 1.40 ಕೋಟಿ ಮೌಲ್ಯದ ಆಸ್ತಿ ಪತ್ತೆ.

12) ಎಎಂ ನಿರಂಜನ್, ಸೀನಿಯರ್ ಭೂಗರ್ಭಶಾಸ್ತ್ರಜ್ಞ
ನಿರಂಜನ್ ಗೆ ಸಂಬಂಧಿಸದಂತೆ ಎರಡು ಕಡೆ ದಾಳಿ, ಒಟ್ಟು 3.66 ಕೋಟಿ ಮೌಲ್ಯದ ಆಸ್ತಿ ಪತ್ತೆ

13) ವಾಗೀಶ್ ಬಸವಾನಂದ ಶೆಟ್ಟರ್, ಪ್ರಾಜೆಕ್ಟ್ ಇಂಜಿನಿಯರ್, ನಿರ್ಮಿತಿ ಕೇಂದ್ರ ಹಾವೇರಿ, ವಾಗೀಶ್‌ಗೆ ಸಂಬಂಧಿಸಿದಂತೆ ಮೂರು ಕಡೆ ದಾಳಿ,ಒಟ್ಟು 4.75 ಕೋಟಿ ಮೌಲ್ಯದ ಆಸ್ತಿ ಪತ್ತೆ

14) ಜರನಪ್ಪ ಎಂ ಚಿಂಚಿಲೀಕರ್, ಎಕ್ಸಿಕ್ಯುಟಿವ್ ಇಂಜಿನಿಯರ್, ಕೆಆರ್ ಐಡಿಎಲ್, ಕೊಪ್ಪಳ, ಜರನಪ್ಪಗೆ ಸಂಬಂಧಿಸಿದ ಐದು ಕಡೆ ಲೋಕಾ ದಾಳಿ, ಒಟ್ಟು 3.5 ಕೋಟಿ ಮೌಲ್ಯದ ಆಸ್ತಿ ಪತ್ತೆ

15) ಸಿಎನ್ ಮೂರ್ತಿ, ಎಕ್ಸಿಕ್ಯುಟಿವ್ ಇಂಜಿನಿಯರ್, ಕೆಐಎಡಿಬಿ ಮೈಸೂರು, ಮೂರ್ತಿಗೆ ಸಂಬಂಧಿಸಿದ ನಾಲ್ಕು ಕಡೆ ಲೋಕಾ ದಾಳಿ
ಒಟ್ಟು 3.5 ಕೋಟಿ ಮೌಲ್ಯದ ಆಸ್ತಿ ಪತ್ತೆ

Related posts

Leave a Comment