ಮಹಾಗಣಪತಿ, ನಾಗದೇವತಾ ಪ್ರತಿಷ್ಠೆ, ಶ್ರೀ ಪ್ರಸನ್ನ ದುರ್ಗಾಪರಮೇಶ್ವರಿ ಸದ್ಗುರು ಸನ್ನಿಧಿಗಳ ಬ್ರಹ್ಮ ಕಲಶೋತ್ಸವ

ಮನುಷ್ಯನಿಗೆ ಆರ್ಥಿಕವಾದಂತಹ ಸಂಪನ್ಮೂಲ ಇರಬಹುದು ಅದನ್ನು ಸಾರ್ವಜನಿಕವಾಗಿ ಸಮಾಜಕ್ಕೆ ವಿನಿಯೋಗ ಮಾಡುವ ಮನಸ್ಸು ಕೆಲವರಿಗಷ್ಟೇ ಇರುತ್ತದೆ’ ಎಂದು ಸಂಸದ ಡಿ.ವಿ. ಸದಾನಂದ ಗೌಡ ಹೇಳಿದರು.


ಅಂದ್ರಹಳ್ಳಿಯ ನವಿಲು ನಗರದಲ್ಲಿ ಸರ್ವ ಸಿದ್ದಿ ಸೇವಾ ಟ್ರಸ್ಟ್ ಅಧ್ಯಕ್ಷ ಸೌಂದರ್ಯ ರಮೇಶ್ ಅವರು ಆಯೋಜಿಸಲಾದ ಶ್ರೀ ಪ್ರಸನ್ನ ದುರ್ಗಪರಮೇಶ್ವರಿ ದೇವಸ್ಥಾನ ಮಹಾ ಗಣಪತಿ ನಾಗದೇವರು ಮತ್ತು ಶಿರಡಿ ಸಾಯಿಬಾಬಾ ದೇವರುಗಳ ಸನ್ನಿಧಿಯಲ್ಲಿ ಬ್ರಹ್ಮ ಕಲಶೋತ್ಸವ ಪೂಜಾ ಪ್ರತಿಷ್ಠಾನದಲ್ಲಿ ಭಾಗವಹಿಸಿ ಮಾತನಾಡಿದರು.
‘ ನಗರ ಪ್ರದೇಶಗಳಲ್ಲಿ ವಿವಿಧ ಸಮಸ್ಯೆಗಳಿಂದ ಆತಂಕಕ್ಕೆ ಒಳಗಾದವರಿಗೆ ದೇವರ ಆರಾಧನೆಯಿಂದ ಸ್ವಲ್ಪ ನೆಮ್ಮದಿ ಸಿಗುತ್ತದೆ. ಎಲ್ಲವನ್ನು ಬಿಟ್ಟು ದೇವರಲ್ಲಿ ಭಾವನಾತ್ಮಕವಾಗಿ ಧ್ಯಾನ ಮಾಡಿದರೆ ನೆಮ್ಮದಿ ಸಿಗುವ ಜಾಗ ಇದಾಗಿದೆ, ಇದೊಂದು ಪವಿತ್ರ ಪುಣ್ಯಭೂಮಿ’ ಎಂದರು.
‘ ಒಳ್ಳೆಯ ಕೆಲಸ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿ, ಅಂತಹ ಉತ್ತಮ ವ್ಯಕ್ತಿತ್ವ ನಿರ್ಮಾಣ ಆಗಬೇಕು. ಅಂತಹ ಕಾರ್ಯದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಮಕ್ಕಳಲ್ಲಿನ ಅಂತ:ಶಕ್ತಿಯನ್ನು ಬೆಳೆಸುವ ಭಾವನೆ ಸೌಂದರ್ಯ ರಮೇಶ್ ಅವರದು. ಈ ದೇವರ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ಮಾಡಿದ ಮಕ್ಕಳು ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಲಿ’ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ನೂರಾರು ಮಕ್ಕಳಿಗೆ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಬ್ರಹ್ಮಶ್ರೀ ಈಶ್ವರ ತಂತ್ರಿ ಹಾಗೂ ವಿದ್ವಾನ್ ಚಂದ್ರಕಾಂತ ಸೋಮಯಾಜಿ ಅವರು ಅಕ್ಷರಾಭ್ಯಾಸ ಮಾಡಿಸಿದರು.
ಈ ವೇಳೆ ಶಾಸಕ ಎಸ್ .ಟಿ. ಸೋಮಶೇಖರ್, ಸೌಂದರ್ಯ ಭರತ್, ಸೌಂದರ್ಯ ರಮೇಶ್ ಭಾಗವಹಿಸಿದ್ದರು.

Related posts

Leave a Comment