ಮದುವೆ ಆಗಿ ಸರಿಯಾಗಿ ಇಪ್ಪತ್ತು ದಿನ ಸಂಸಾರ ಮಾಡಲಿಲ್ಲ: ಗಂಡ ಹೆಂಡತಿ ಇಬ್ಬರು ದಾರೂಣ ಸಾವು

ವಿಜಯಪುರ: ಆ ದಂಪತಿ ಇತ್ತೀಚೆಗಷ್ಟೆ ಅಂದರೇ ಮೇ 22ರಂದು ಎರಡು ಕುಟುಂಬದವರು ಒಪ್ಪಿ ಮದುವೆ ಮಾಡಿಕೊಟ್ಟಿದ್ದರು, ಎರಡು ಕುಟುಂಬಗಳಲ್ಲಿ ಮದುವೆಯ ಸಂಭ್ರಮ ಇನ್ನೂ ಪ್ರಜ್ವಲಿಸುತ್ತಿರುವಾಗೆಯೆ ಸೂತಕದ ಚಾಯೆ ಮನೆ ಮಾಡಿದೆ.

ವಿಜಯಪುರ ಜಿಲ್ಲೆ ವಿಜಯಪುರ ನಗರದ ಹೊರವಲಯದಲ್ಲಿ ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ದಂಪತಿಗಾಲಿಬ್ಬರೂ ದಾರೂಣವಾಗಿ ಸಾವನ್ನಪ್ಪಿದ್ರಾರೆ.

ಶಿಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಹೊನಮಲ್ಲ ತೆರದಾಳ (31), ಅವರ ಹೆಂಡತಿ ಗಾಯತ್ರಿ (24) ಅಪಘಾತದಿಂದ ಸ್ಥಳದಲ್ಲೆ‌ ಸಾವನ್ನಪ್ಪಿದ್ದಾರೆ. ಇವರಿಬ್ಬರಿಗೂ ಕಳೆದ ಮೇ 22 ರಂದು ವಿವಾಹವಾಗಿತ್ತು ಆದ್ರೆ ಮದುವೆಯಾಗಿ 24 ದಿನಗಳಲ್ಲಿ ಈ ಜೋಡಿಯಲ್ಲಿ ವಿಧಿಯಾಟ ಆಡಿದೆ.

ಸಂಬಂಧಿಕರ ಮಕ್ಕಳ ಹುಟ್ಟುಹಬ್ಬಕ್ಕೆ ಹೋಗಿ ವಾಪಸ್ ಬರುವಾಗ ನಡೆದ ಅಪಘಾದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದು ಘಟನೆಗೆ ಸಂಬಂಧಿಸಿದಂತೆ ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Comment