ಮಗನನ್ನೆ ಭರ್ಬರವಾಗಿ ಹಿರಿದು ಕೊಂದ ಚಿಕ್ಕಪ್ಪ, ಕಾರಣ ಕೇಳುದ್ರೆ ಬೆಚ್ಚಿ ಬೀಳ್ತೀರ

ಬೆಂಗಳೂರು (ಜೂ 1): ಕ್ಷುಲಕ ಕಾರಣಕ್ಕೆ ಚಿಕ್ಕಪ್ಪನೆ ಮಗನನ್ನ ಚಾಕುವಿನಿಂದ ಹಿರಿದು ಭರ್ಬರವಾಗಿ ಕೊಪೆ ಮಾಡಿರುವ ಘಟನೆ ಬೆಂಗಳೂರಿನ ಕೆಂಗೇರಿ ಸರ್ಕಲ್ ಬಳಿ ನಡೆದಿದೆ.

ಕೆಂಗೇರಿ ಉಪನಗರದ ಹ್ಯಾಪಿ ಡೇ ಬಾರ್ ಸಮೀಪ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದು, ತೀವ್ರ ರಕ್ತಸ್ರಾವದಿಂದ ನವೀನ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.‌ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಾಥಮಿಕ ಮಾಹಿತಿ ಪ್ರಕಾರ್‌ ಮೃತ ನವೀನ್‌ನ ಚಿಕ್ಕಪ್ಪ ಕುಮಾರ್ ಎಂಬಾತನಿಂದ ಕೊಲೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮರ್ಯಾದೆ ಕಾರಣಕ್ಕೆ ಕೊಲೆ: ಹೌದು ನವೀನ್ ಯಾವಾಗಲು ಪಾನಮತ್ತನಾಗಿ ತನ್ನ ಚಿಕ್ಕಪ್ಪ ಆರೋಪಿ ಕುಮಾರ್‌ಗೆ ಮರ್ಯಾದೆ ಕೊಡದೆ ಮಾತನಾಡುತ್ತಿದ್ದನಂತೆ. ಈಗಾಗಿ ನವೀನ್ ಮೇಲೆ ಆರೋಪಿ ಕುಮಾರ್ ದ್ವೇಷ ಬೆಳೆಸಿಕೊಂಡಿದ್ದ

ಸಂದಾನಕ್ಕೆ ಕರೆದು ಕೊಲೆ: ತನ್ನ ಅಣ್ಣನ ಮಗನೇ ನನಗೆ ಮರ್ಯಾದೆ ಕೊಡುತ್ತಿಲ್ಲ ಎಂದು ಕುಪಿತನಾಗಿದ್ದ ಆರೋಪಿ ಕುಮಾರ್ ನೆನ್ನೆ ಸಂಜೆ ಸಂಜೆ ತನ್ನ ಸ್ನೇಹಿತರ ಜೊತೆ ಹ್ಯಾಪಿ ಡೇ ಬಾರ್‌ಗೆ ಬಂದಿದ್ದ, ಈ ವೇಳೆ ಕಂಠ ಪೂರ್ತಿ ಕುಡಿದ್ದ ಕುಮಾರ್ ಬಳಿಕ ಸಂಧಾನಕ್ಕೆಂದು ಕರೆದಿದ್ದಾನೆ. ಕಂಠಪೂರ್ತಿ ತಾನೂ ಕುಡಿದು ಬಳಿಕ ನವೀನ್‌ಗೂ ಕುಡಿಸಿದ್ದಾನೆ, ಕುಡಿದು ಬಾರ್‌ನಿಂದ ಹೊರ ಬರುತ್ತಿದ್ದಂತೆ ತನ್ನ ಬಳಿಯಿದ್ದ ಮಾರಕಾಸ್ತ್ರಗಳಿಂದ ನವೀನ್‌ನನ್ನ ಕೊಚ್ಚಿ ಭರ್ಬರವಾಗಿ ಕೊಲೆ ಮಾಡಿದ್ದಾಎವ್.‌

ಸಿಸಿ ಕ್ಯಾಮೆರಾ ಕೊಟ್ಟ ಸಾಕ್ಷ: ಇನ್ನೂ ಕೊಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಲಭ್ಯವಾಗಿದೆ, ಸಿಸಿ ಕ್ಯಾಮೆರಾ ಆದರಿಸಿ ಕೊಲೆ ಮಾಡಿರುವುದು ಮೃತ ನವೀನ್‌ನ ಚಿಕ್ಕಪ್ಪ ಕುಮಾರ್ ಎಂಬುದು ಪೊಲೀಸರಿಗೆ ಖಚಿತವಾಗಿತ್ತು

ಹೆಜ್ಜೆ ಗುರುತು: ಇನ್ನೂ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡುವಾಗ ಆರೋಪಿ ಕುಮಾರ್ ಕಾಲಿಗೂ ಗಾಯಗಳಾಗಿವೆ, ಕೊಲೆ ಮಾಡಿದ ಬಳಿಕ ಕಾಲಿಗೆ ಗಾಯವಾಗಿದ್ರೂ ಸುಮಾರು ಒಂದು ಕಿಲೋ ಮೀಟರ್ ಓಡಿ ಸುಸ್ತಾಗಿ ಬಿದ್ದಿದ್ದ ಆರೋಪಿ ಕುಮಾರ್. ದಾರಿಯುದ್ದಕ್ಕೂ ರಕ್ತದ ಹೆಜ್ಜೆ ಗುರುತು ಬಿದ್ದಿತ್ತು ರಕ್ತದ ಹೆಜ್ಜೆ ಗುರುತು ಹುಡುಕುತ್ತಾ ಹೋದಾಗ ಆರೋಪಿ ಕುಮಾರ್ ಸಿಕ್ಕಿ ಬಿದ್ದಿದ್ದಾನೆ.

ಆರೋಪಿಯನ್ನ ವಶಕ್ಕೆ ಪಡೆದ ಪೊಲೀಸರು ತಕ್ಷಣವೇ ಆರೋಪಿ ಕುಮಾರ್‌ಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ, ಉಳಿದ ಆರೋಪಿಗಳಿಗಾಗಿ ಪೊಲೀಸರ ಶೋಧಕಾರ್ಯ ನಡೆಸುತ್ತಿದ್ದಾರೆ.

Related posts

Leave a Comment