ಬಸ್ಸು ನಿಲ್ದಾಣ ನಮ್ಮ ಮೂಲ ಭೂತ ಹಕ್ಕು ಅದನ್ನು ಕೇಳಿ ಪಡಿಯುತ್ತೇವೆ: ಯುವ ಶಕ್ತಿ ಕರ್ನಾಟಕ

ದೊಡ್ಡಬಳ್ಳಾಪುರದ ಯುವಜನರು ಬಾಶೆಟ್ಟಿಹಳ್ಳಿಯಲ್ಲಿ ತಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದಾದ ಬಸ್ಸು ನಿಲ್ದಾಣ ನಿರ್ಮಾಣ ಮಾಡಿಕೊಡುವಂತೆ ಕೇಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಇದರ ಮೂಲಕ ಸಮಾಜದಲ್ಲಿ ಯುವ ಜನರ ಪಾತ್ರವನ್ನು ಸಕ್ರಿಯವಾಗಿಸಿ ಪ್ರಜಾಪ್ರಭುತ್ವದಲ್ಲಿನ ಯುವ ಜನರ ಪಾತ್ರ ಮತ್ತು ಪ್ರಮುಖ್ಯತೆಯನ್ನು ತಿಳಿಸುವ ಜೊತೆಗೆ ಕಲಿಸುವಂತೆ ಮಾಡುತ್ತಿದೆ.

ಸಂವಿಧಾನದಲ್ಲಿ ಪ್ರಶ್ನೆ ಮಾಡುವುದು ಕೂಡ ನಮ್ಮ ಹಕ್ಕು ಅದರಂತೆ ಮೂಲಭೂತ ಸೌಕರ್ಯಗಳನ್ನು ಕೇಳುವುದು ಕೂಡ ನಮ್ಮಗಳ ಹಕ್ಕು ಎಂಬುದನ್ನು ಇಲ್ಲಿನ ಯುವಜನರು ಪ್ರಶ್ನಿಸುವ ಮೂಲಕ ತಮ್ಮ ಗ್ರಾಮದ ಜನರಿಗೆ ಮಾದರಿಯೆಂಬಂತೆ ತಿಳಿಸುವಂತಹ ಕೆಲಸ ಮಾಡಿದ್ದಾರೆ.

ಯುವ ಶಕ್ತಿಯೆಂದರೆ ನಾನಲ್ಲ, ನಾವು ಎಂಬುದನ್ನು ಅರಿತು ನಾವೆಲ್ಲರೂ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳುವಂತಹ ಕೆಲಸವನ್ನು ಮಾಡೋಣಾ.

ಇಲ್ಲವಾದರೆ ಪ್ರಶ್ನಿಸುವುದನ್ನೆ, ಕೇಳುವುದನ್ನೆ, ಭಾಗವಹಿಸುವುದನ್ನೆ ಇಲ್ಲವಾಗಿಸಿ ರಾಜಪ್ರಭುತ್ವವನ್ನು ಜಾರಿಗೊಳಿಸಿ ಬಿಡುತ್ತಾರೆ ಎಚ್ಚರ.! ಎಂದು ಸಂದೇಶ ಕೊಡುವ ಮೂಲಕ ಯುವಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.

Related posts

Leave a Comment