ಬಕ್ರಿದ್ ಹಬ್ಬದ ವೇಳೆ ಇಂಗೆ ಮಾಡುದ್ರೆ ಬದುಕೋದು ಹೇಗೆ

ನೆಲಮಂಗಲ: ಬಕ್ರೀದ್ ಸಮೀಪಿಸುತ್ತಿರುವ ಹಿನ್ನೆಲೆ ತಾಲೂಕಿನಾದ್ಯಂತ   ಕುರಿ-ಮೇಕೆ ಕಳ್ಳತನ ಹೆಚ್ಚಾಗಿದ್ದು ರೈತರು ಕಂಗಾಲಾಗಿದ್ದಾರೆ.

ಜೂ.22 ರಂದು ತಡರಾತ್ರಿ ನಗರದ ಭಕ್ತನಪಾಳ್ಯ ಗ್ರಾಮದ ನಿವಾಸಿ ರಾಮಣ್ಣ ಎಂಬಾತರಿಗೆ ಸೇರಿದ್ದ ಸುಮಾರು 30 ಸಾವಿರ ಮೌಲ್ಯದ ನಾಲ್ಕು ಮೇಕೆಗಳನ್ನು ದುಷ್ಕರ್ಮಿಗಳು ಕದ್ದು ಪರಾರಿಯಾಗಿದ್ದಾರೆ. ಜೂ. 23 ರ ಶುಕ್ರವಾರ ಬೆಳಗ್ಗೆ 5 ಗಂಟೆ ವೇಳೆಯಲ್ಲಿ ರಾಮಣ್ಣ ಬಂದು ನೋಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ರಾಮಣ್ಣ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು ದುಷ್ಕರ್ಮಿಗಳು ಮೇಕೆ ಕಳವು ಮಾಡಿದ್ದ ದೃಶ್ಯ ಸಮೀಪ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುದೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವಿದೆಡೆ ಕಳವು: ತಾಲೂಕಿನಾದ್ಯಂತ ಹಾಗೂ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿದೆಡೆ ಕಳೆದ 15 ದಿನದಿಂದ ಸುಮಾರು ನೂರಕ್ಕೂ ಹೆಚ್ಚು ಕುರಿ ಮೇಕೆ ಕಳ್ಳತನ ವಾಗಿದ್ದು ಬೆಳಕಿಗೆ ಬಂದಿದೆ.

ರೈತ ರಾಮಣ್ಣ ಮಾತನಾಡಿ ಬಕ್ರೀದ್ ಹಬ್ಬಕ್ಕೆ ವ್ಯಾಪಾರ ಮಾಡಲು ಕುರಿ-ಮೇಕೆಗಳನ್ನು ಸಾಗಕಿದ್ದು ಬಲಿಷ್ಠವಾಗಿದ್ದ ನಾಲ್ಕು ಮೇಕೆಗಳನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ ಎಂದು ಆಳವು ತೊಡಿಕೊಂಡರು.‌

ಸಾರ್ವಜನಿಕರ ಮನವಿ: ನಗರ ಸೇರಿದಂತೆ ತಾಲೂಕಿನಾದ್ಯಂತ ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದಂತೆ ಸಾಕಷ್ಟು ಕುರಿ ಮೇಕೆ ಕಳ್ಳತನವಾಗುತ್ತಿದೆ‌. ಪೊಲೀಸ್ ಇಲಾಖೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ರಾತ್ರಿವೇಳೆ ಪೊಲೀಸ್ ಸಿಬ್ಬಂದಿಗಳ ಗಸ್ತು ಹೆಚ್ಚಳ ಮಾಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

Related posts

Leave a Comment