ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಸರಣಿ ಕಳ್ಳತನ – Digital Varthe

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಡಾಬಸ್‌ಪೇಟೆಯಲ್ಲಿ ಸರಣಿ ಕಳ್ಳತನ ನಡೆದಿದೆ. ಡಾಬಸ್‌ಪೇಟೆ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಈ ಸರಣಿ ಕಳ್ಳತನ ನಡೆದಿರೋದು ಪೊಲೀಸ್ ಇಲಾಖೆ ಮೇಲೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಡಾಬಸ್‌ಪೇಟೆ ಮಧುಗಿರಿ ರಸ್ತೆಯ ಮೂರು ಮೆಡಿಕಲ್ ಸ್ಟೋರ್‌, ಒಂದು ಆಟೋಮೊಬೈಲ್ಸ್ ಸೇರಿದಂತೆ ಒಟ್ಟು ನಾಲ್ಕು ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ರಾತ್ರಿ 1 ಗಂಟೆ ಸುಮಾರಿಗೆ ಬೈಕ್‌ ಒಂದರಲ್ಲಿ ಬರುವ ಏಕೈಕ ಕಳ್ಳ ನಾಲ್ಕು ಅಂಗಡಿಗಳ ಭೀಗ ಮುರಿದು, ಗಲ್ಲಾ ಪೆಟ್ಟಿಗೆಗೆ ಕೈ ಹಾಕಿ ಸುಮಾರು 20 ಸಾವಿರ ಹಣ ದೋಚಿ ಪರಾರಿಯಾಗಿದ್ದಾನೆ. ಅಲ್ಲದೆ ಇದೇ ಮಾದರಿಯಲ್ಲಿ ಕಳೆದ ಆರು ತಿಂಗಳ ಹಿಂದೆ ಸಹ ಕಳ್ಳತನವಾಗಿದ್ದು ಅಂದು ನಡೆದ ಕಳ್ಳತನಕ್ಕೂ ಇಂದು ನಡೆದ ಕಳ್ಳತನಕ್ಕೂ ಸಾಮ್ಯತೆ ಕಾಣಿಸುತ್ತಿದೆ. ಈಗಾಗಿ ಕಳ್ಳತನ್ನ ಹಿಡಿದು ಸಮಸ್ಯೆ ಬಗೆಹರಿಸಿಬೇಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಡಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನ ಆಧರಿಸಿ ತನಿಖೆಗೆ ಇಳಿದಿದ್ದಾರೆ.

Related posts

Leave a Comment