ಪರಿಸರ ಸಮತೋಲನೆಯಲ್ಲಿ ಪ್ರಮುಖ ಪಾತ್ರವಹಿಸುವ ಗಿಡಮರಗಳನ್ನು ಹೆಚ್ಚು ಬೆಳೆಸಬೇಕಿದೆ: ನಗರಸಭಾ ಸದಸ್ಯ ಎನ್.ಗಣೇಶ್‌

ನೆಲಮಂಗಲದ ಎಂ.ಇ.ಎಸ್.ಶಾಲಾ ವಿದ್ಯಾರ್ಥಿಗಳು ಪರಿಸರ ದಿನಾಚರಣೆ ಪ್ರಯುಕ್ತ ಪಟ್ಟಣದ ಪ್ರವಾಸಿಮಂದಿರ ಬಳಿಪರಿಸರ ಸಂರಕ್ಷಣೆ ಮಹತ್ವ ಕುರಿತ ನೃತ್ಯರೂಪಕ ಪ್ರದರ್ಶಿಸಿದರು. ನಗರಸಭೆ ಸದಸ್ಯ ಎನ್.ಗಣೇಶ್, ಕಾರ್ಯದರ್ಶಿ ಕಾಂತರಾಜು ಮತ್ತಿತರರು ಇದ್ದರು.

ನೆಲಮಂಗಲ: ಮಹಾತ್ಮಗಾಂಧೀಜಿ ಅವರ ಮನೆಗೊಂದು ಮರ ಊರಿಗೊಂದು ವನ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಮಾಲಿನ್ಯಮುಕ್ತ ಪರಿಸರದ ಅವಶ್ಯಕತೆಯಿದೆ ಎಂದು ನಗರದ ಸದಸ್ಯ ಎನ್.ಗಣೇಶ್ ಅಭಿಪ್ರಾಯಪಟ್ಟರು.

ನಗರದ ಪ್ರವಾಸಿ ಮಂದಿರದ ಅವರಣದಲ್ಲಿ ಎಂ.ಇ.ಎಸ್.ಶಾಲೆಯಿAದ ಪರಿಸರ ದಿನಾಚರಣೆ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಗಿಡನೆಡುವ ಹಾಗೂ ಪರಿಸರ ಸಂರಕ್ಷಣೆ ಕುರಿತ ಜನಜಾಗೃತಿ ಜಾಥಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಪ್ರಾಣಿಪಕ್ಷಿಗಳಿಗಷ್ಠೆ ಅಲ್ಲ ಪರಿಸರ ಸಮತೋಲನೆಯಲ್ಲಿ ಪ್ರಮುಖ ಪಾತ್ರವಹಿಸುವ ಗಿಡಮರಗಳನ್ನು ಹೆಚ್ಚು ಬೆಳೆಸಬೇಕಿದೆ ಎಂದರು.

ಶಾಲಾಕಾರ್ಯದರ್ಶಿ ಕಾಂತರಾಜು ಮಾತನಾಡಿ ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯಸಂಪತ್ತು ನಾಶ ಮಾಡುವುದು ಒಳ್ಳೆಯದಲ್ಲ. ಇರುವ ಸಸ್ಯ ಸಂಪತ್ತನ್ನು ಉಳಿಸಿಕೊಂಡು ಉತ್ತಮ ಪರಿಸರ ನಿರ್ಮಾಣ ಮಾಡಬೇಕಾದ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ. ದಿನನಿತ್ಯ ವಿವಿಧ ದಿನಾಚರಣೆ ಮಾಡುತ್ತಿರುವ ಸನ್ನಿವೇಶದಲ್ಲಿ ಪರಿಸರದ ದಿನಾಚರಣೆಯ ಮಹತ್ವವನ್ನು ಅರಿತುಕೊಳ್ಳಬೇಕಿದೆ. ಶಾಲಾಮಕ್ಕಳು ಚಿಕ್ಕಂದಿನಲ್ಲಿಯೇ ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ಕೊಡಬೇಕಿದೆ ಎಂದರು.

ಕಾರ್ಯಕ್ರಮದ ಪ್ರಯುಕ್ತ ಪ್ರವಾಸಿ ಮಂದಿರದ ಅವರಣದಲ್ಲಿ ಗಿಡನೆಟ್ಟ ವಿದ್ಯಾರ್ಥಿ ಮತ್ತು ಶಿಕ್ಷಕರು ನಗರದ ಪ್ರಮುಖ ಬೀದಿಗಳಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಘೋಷನೆ ಕೂಗುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸಿದರು.

ಗಮನಸೆಳೆದ ನೃತ್ಯರೂಪಕ: ಕಾರ್ಯಕ್ರಮದ ಪ್ರಯುಕ್ತ ಪಟ್ಟಣದ ಚೆನ್ನಪ್ಪಬಡಾವಣೆ ಮತ್ತು ಪ್ರವಾಸಿಮಂದಿರದ ಬಳಿ ಪರಿಸರ ಸಂರಕ್ಷಣೆ ಕುರಿತ ನೃತ್ಯರೂಪಕ ಪ್ರದರ್ಶಿಸಿದ ಶಾಲಾವಿದ್ಯಾರ್ಥಿಗಳು ಸಾರ್ವಜನಿಕರ ಗಮನಸೆಳೆದರು. ಜತೆಗೆ ಪ್ಲಾಸ್ಟಿಕಾಸುರ ಎಂಬ ಬೀಧಿನಾಕಟವನ್ನು ಶಾಲಾ ವಿದ್ಯಾರ್ಥಿಗಳು ಅಭಿನಯಿಸಿದರು.

ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಜಯಂತಿಮAಜುನಾಥ್ ಮಾತನಾಡಿದರು. ಸಂದರ್ಭದಲ್ಲಿ ಪರಿಸರ ಪ್ರೇಮಿ ಅಯ್ಯಪ್ಪ, ನಗರಸಭೆ ಸದಸ್ಯ ಸುನೀಲ್‌ಮೂಡ್, ಅಂಜಿನಪ್ಪ, ಮುಖಂಡ ನಾರಾಯಣ್‌ರಾವ್, ಶಾಲಾ ಸಹಶಿಕ್ಷಕ ಪವನ್, ಚಂದನ್, ಚನ್ನೇಗೌಡ, ಸುಹಾಸ್, ವಿವೇಕ್, ಹರ್ಪಿತಾ, ಬಿ.ಎಲ್.ಉಮಾ, ನೇತ್ರಾ, ನಂದಶ್ರೀ ಉಪಸ್ಥಿತರಿದ್ದರು.

Related posts

Leave a Comment