ನೆಲಮಂಗಲ ಟಿಎಪಿಸಿಎಂಎಸ್ ಗೆ ಮಹಿಳಾ ಸಾರಥಿ: ನೂತನ ಅಧ್ಯಕ್ಷೆಯಾಗಿ ಮಂಜುಳಾ ಮೋಹನ್‌ ಕುಮಾರ್‌ ಅವೀರೋಧ ಆಯ್ಕೆ

ನೆಲಮಂಗಲ: ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಅಧ್ಯಕ್ಷರ ರಾಜೀನಾಮೇಯಿಂದ ತೆರವಿದ್ದ ಸ್ಥಾನಕ್ಕೆ ಸೋಂಪುರ ಬಿ.ತರಗತಿ ಪ್ರತಿನಿಧಿ ಮಂಜುಳಾಮಹೋನ್‌ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿ ತ್ಯಾಮಗೊಂಡ್ಲು ವಿಎಸ್‌ಎಸ್‌ಎಸ್‌ಎನ್ ಪ್ರತಿನಿಧಿ ಕೆ.ಆರ್.ಗುರುಪ್ರಕಾಶ್ ಕಳೆದ ೨೦೨೩ರ ಮಾ.೨೯ ರಂದು ರಾಜೀನಾಮೆ ನೀಡಿದ್ದು ಏ.೧೮ರಂದು ರಾಜೀನಾಮ ಅಂಗೀಕಾರವಾಗಿ ಮೇ.೫ರಂದು ಚುನಾವಣೆ ನಿಗಧಿಯಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಮಂಜುಳಾಮಹೋನ್‌ಕುಮಾರ್ ನಾಮಪತ್ರ ಸಲಿಸಿದ್ದು ಅವಿರೋಧವಾಗಿ ಆಯ್ಕೆ ಮಾಡಲಾಗದೆ ಚುನಾವಣಾಧಿಕಾರಿ ಭಾಸ್ಕರ್ ಎಂದು ತಿಳಿಸಿದ್ದರು.

ನೂತನ ಅಧ್ಯಕ್ಷೆ ಮಂಜುಳಾಮಹೋನ್‌ಕುಮಾರ್ ಮಾತನಾಡಿ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘವನ್ನು (ಟಿಎಪಿಸಿಎಂಎಸ್) ಸುಮಾರು ದಶಕಗಳಿಂದ ಹಿರಿಯರು ನಡೆಸಿಕೊಂಡು ಬಂದಿದ್ದು ಹಿರಿಯ ಮಾರ್ಗದರ್ಶನದಂತೆ ಅಧಿಕಾರ ನಡೆಸುವುದರ ಜತೆಗೆ ಸರ್ಕಾರದಿಂದ ದೊರೆಯುವ ಸಕಲ ಸೌಲಭ್ಯಗಳನ್ನು ಸಂಘದ ಸದಸ್ಯರಿಗೆ ಸಮರ್ಪಕವಾಗಿ ತಲುಪಿಸಲಾಗುವುದು. ಸಂಘದ ಸದಸ್ಯರಿಗೆ ಬೇಕಾದ ಮೂಲಭೂತ ಸೌಕರ್ಯ, ರಾಗಿ, ದಿನಸಿ ಪದಾರ್ಥ, ರಾಸಾಯನಿಕ ಸಿಂಪಣೆ, ರಸಗೊಬ್ಬರ ಸೇರಿದಂತೆ ಬಿತ್ತನೆ ಬೀಜಗಳನ್ನು ಕಾಲಕಾಲಕ್ಕೆ ಒದಗಿಸಲಾಗುವುದು ಎಂದರು.

ಹಿರಿಯ ವಕೀಲ ಕೇಶವ್‌ಮೂರ್ತಿ ಮಾತನಾಡಿ ಸಂಘ ಸ್ಥಾಪನೆ ಆದಾಗಿನಿಂದ ಮಹಿಳೆ ಅಧ್ಯಕ್ಷೆ ಆಯ್ಕೆಯಾಗಿರಲಿಲ್ಲ. ಪ್ರಥಮ ಬಾರಿಗೆ ಸಂಘಕ್ಕೆ ಮಹಿಳೆಯನ್ನು ಅಧ್ಯಕ್ಷೆಯಾಗಿ ಆಯ್ಕೆಮಾಡಿರುವುದು ಸಂತೋಷಕರ ಸಂಗತಿ ಎಂದರು.

ಅಭಿನAದನೆ: ನೂತವಾಗಿ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದ ಮಂಜುಳಾಮೋಹನ್‌ಕುಮಾರ್ ಅವರನ್ನು ಆಡಳಿತ ಮಂಡಳಿ ನಿರ್ದೇಶಕರು, ರೈತರು, ಮುಖಂಡರು ಸೇರಿದಂತೆ ಜನಪ್ರತಿನಿಧಿಗಳು ಅಭಿನಂದಿಸಿದರು.

ಸAದರ್ಭದಲ್ಲಿ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘವನ್ನು (ಟಿಎಪಿಸಿಎಂಎಸ್) ಉಪಾಧ್ಯಕ್ಷೆ ಹೆಚ್.ಎಂ.ಸಿAಧು, ನಿರ್ದೆಶಕ ಎ.ಪಿಳ್ಳಪ್ಪ, ಪಟ್ಟಭಿರಾಮಯ್ಯ, ಜಗಜ್ಯೋತಿಬಸವೇಶ್ವರ, ಬಿ.ಎಚ್.ಶಿವರಾಮಯ್ಯ, ವೀರಮಾರೇಗೌಡ, ಟಿ.ಎಸ್.ಮೋಹನ್‌ಕುಮಾರ್, ಮಹಮ್ಮದ್‌ಸಿರಾಜ್‌ಅಹಮದ್, ಬಿ.ಎನ್.ನರಸಿಂಹಮೂರ್ತಿ, ಕಾರ್ಯದರ್ಶಿ ಚಂದ್ರಶೇಖರ್, ಮುಖಂಡ ಮೋಹನ್‌ಕುಮಾರ್, ವಕೀಲ ಹನುಮಂತೇಗೌಡ, ಮುನುಗೌಡ, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Comment