ನಾಡಿನ ಕವಿಗಳು ಪರಿಸರ ಸಂರಕ್ಷಣೆ ಬಗ್ಗೆ ಬರವಣಿಗೆಗೆ ಮೂಲಕ ಅರಿವು ಮೂಡಿಸಿದ್ದಾರೆ: ಡಿ.ಸಿದ್ದರಾಜು

ನೆಲಮಂಗಲ: ಅಧುನಿಕತೆ ಬೆಳೆಯುತ್ತಿದ್ದಂತೆ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಪರಿಸರ ರಕ್ಷಣೆ ಅನಿವಾರ್ಯವಾಗಿದ್ದು ಪ್ರತಿಯೊಬ್ಬ ಪರಿಸರ ರಕ್ಷಣೆಗೆ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ಕನ್ನಡ ಸಾಂಸ್ಕೃತಿಕ ರಂಗ ಅಧ್ಯಕ್ಷರು ಡಿ.ಸಿದ್ದರಾಜು ತಿಳಿಸಿದರು.

ತಾಲೂಕಿನ ಬೂದಿಹಾಲ್ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಂಡಿಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿ ಕನ್ನಡ ಸಾಂಸ್ಕೃತಿಕ ರಂಗದಿಂದ ಮಾಸ್ತಿವೆಂಕಟೇಶ್ ಅಯ್ಯಂಗಾರ್ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಕನ್ನಡ ರತ್ನಕೋಶ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಯೊಬ್ಬರು ಪರಿಸರ ಸ್ನೇಹಿ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಹಕಾರ ನೀಡಬೇಕು. ನಾಡಿನ ಕವಿಗಳು ಪರಿಸರ ಸಂರಕ್ಷಣೆ ಬಗ್ಗೆ ಜನಸಾಮನ್ಯರಿಗೆ ತಮ್ಮ ಬರವಣಿಗೆಗೆ ಮೂಲಕ ಅರಿವು ಮೂಡಿಸಿದ್ದಾರೆ. ಅದ್ದರೆ ಇತ್ತೀಚೆಗೆ ಅಧುನಿಕತೆ ಬೆಳೆಯುತ್ತಿದ್ದಂತೆ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಪರಿಸರ ರಕ್ಷಣೆ ಅನಿವಾರ್ಯವಾಗಿದ್ದು ಪ್ರತಿಯೊಬ್ಬ ಪರಿಸರ ರಕ್ಷಣೆಗೆ ಬಗ್ಗೆ ಕಾಳಜಿ ವಹಿಸಬೇಕಿದೆ. ವಿಶೇಷವಾಗಿ ಮಕ್ಕಳು ಚಿಕ್ಕಂದಿನಿಂದಲೇ ಪರಿಸರದ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಿಕೊಳ್ಳಬೇಕಿದೆ. ಶಿಕ್ಷಕರು ಮಕ್ಕಳಿಗೆ ಪರಿಸರ ಬಗ್ಗೆ ಮಕ್ಕಳಿಗೆ ತಿಳಿಸುವ ಕಾರ್ಯ ಮಾಡಬೇಕಿದೆ ಎಂದರು.

ಕ್ಷೇತ್ರಶಿಕ್ಷಣಾಧಿಕಾರಿ ಎಂ.ಹೆಚ್.ತಿಮ್ಮಯ್ಯ ಮಾತನಾಡಿ ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿ ಶಿಕ್ಷಣ ಇಲಾಖೆಯೊಂದಿಗೆ ಸಹಕಾರ ನೀಡುತ್ತಿರುವ ಸರ್ಕಾರೇತರ ಸಂಘ ಸಂಸ್ಥೆಗಳ ಕಾರ್ಯ ಮಹತ್ವವಾದದ್ದು. ತಾಲೂಕಿನಾದ್ಯಂತ ಕನ್ನಡ ಸಾಂಸ್ಕೃತಿಕ ರಂಗ ಸರ್ಕಾರಿ ಶಾಲಾ ಮಕ್ಕಳಿಗೆ ಕನ್ನಡ ರತ್ನಕೋಶವನ್ನು ನೀಡುತ್ತಿರುವುದು ಸಂತೋಷಕರ ಸಂಗತಿ ಎಂದರು.

ಅಭಿನಂದನೆ: ಕಾರ್ಯಕ್ರಮದ ಪ್ರಯುಕ್ತ ಶಾಲಾ ಅವರಣದಲ್ಲಿ ಹತ್ತಾರು ಗಿಡಗಳನ್ನು ನೆಟ್ಟಲಾಯಿತು. ಬಳಿಕ ಶಾಲಾ ಮಕ್ಕಳಿಗೆ ಕನ್ನಡ ರತ್ನಕೋಶವನ್ನು ವಿತರಣೆ ಮಾಡಿದರು. ಜತೆಗೆ ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಶಾಲೆಯ ಮೋನಿಕಾ ಎಂಬ ವಿದ್ಯಾರ್ಥಿಯನ್ನು ಅಭಿನಂದಿಸಲಾಯಿತು.

ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷ ರಾಮಚಂದ್ರೇಗೌಡ, ಸಾಹಿತಿ ವೆಂಕಟೇಶ್‌ಚೌಥಾಯಿ, ರಾಮಯ್ಯ, ಶಾಲಾ ಮುಖ್ಯಶಿಕ್ಷಕ ಸಚ್ಚಿದಾನಂದಸ್ವಾಮಿ, ಶಿಕ್ಷಕ ಬೈಲಪ್ಪ, ಗೋವಿಂದರಾಜು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಂಗಾಧರಯ್ಯ ಮತ್ತಿತರರು ಉಪಸ್ಥಿತರಿದರು.

Related posts

Leave a Comment