ಜಿಂಕೆ ಬೇಟೆಯಾಡಿದ ಇಬ್ಬರ ಬಂಧನ ,ಮೂವರು ಪರಾರಿ: ರೋಚಕ ಚೇಸಿಂಗ್

ಜಿಂಕೆ ಭೇಟೆಯಾಡಿ ಮಾಂಸ ಕತ್ತರಿಸುತ್ತಿದ್ದ ಇಬ್ಬರನ್ನ ಸ್ಥಳದಲ್ಲೆ ಬಂಧಿಸಿದ್ದು, ಮೂವರು ಸ್ಥಳದಿಂದ ಪರಾರಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವನ್ಯ ಜೀವಿ ಅರಣ್ಯ ವಲಯದಲ್ಲಿ ಘಟನೆ. ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ಮೂರ್ತಿ ಮತ್ತು ರಾಮು ಎಂಬುವರು ಸೇರಿದಂತೆ ಐದು ಜನ ಕೊಳ್ಳೇಗಾಲದ ರಾಯರಹಳ್ಳ ಅರಣ್ಯ ಪ್ರದೇಶದಲ್ಲಿ ನಾಡ ಬಂದೂಕು ಬಳಸಿ ಜಿಂಕೆ ಬೇಟೆಯಾಡಿದ್ದರು.

ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್ ಅಹಿಂಸಾಗೆ ಹೈಕೋರ್ಟ್ ಮತ್ತೆ ಬಿಗ್ ರಿಲೀಫ್

ಬಳಿಕ ಮಾಂಸತಂದು ಕತ್ತರಿಸಿ ಭಾಗ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂರ್ತಿ, ರಾಮು ಎನ್ನುವ ಹೆಸರಿನ ಇಬ್ಬರು ಆರೋಪಿಗಳನ್ನ ಸ್ಥಳದಲ್ಲೆ ಬಂದಿಸಿದ್ದಾರೆ, ದಾಳಿ ವೇಳೆ ಸ್ಥಳದಲ್ಲಿ ಐದು ಜನ ಇದ್ದು ಇನ್ನುಳಿದ ಮೂರು ಜನ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಆನೆ ದಂತ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳ ಬಂಧನ: ಕೋಟ್ಯಾಂತರ ರೂಪಾಯಿ ಮೌಲ್ಯದ ದಂತ ವಶಕ್ಕೆ

ಬಂಧಿತರಿಂದ ನಾಲ್ಕು ಚಾಕು, ಎರಡು ಮೊಬೈಲ್ ,ಮೂರು ಬೈಕ್ ಹಾಗೂ 35 ಕೆ. ಜಿ. ಜಿಂಕೆ ಮಾಂಸ ವಶಕ್ಕೆ ಪಡೆದಿದ್ದು ಪರಾರಿಯಾದ ಮೂರು ಜನರ ಬಂಧನಕ್ಕೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.

Related posts

Leave a Comment