ಚಿರತೆ ದಾಳಿ ವೇಳೆ ಮಾಲಕಿಯನ್ನ ರಕ್ಷಿಸಲು ತನ್ನನ್ನ ಬಲಿ ಕೊಟ್ಟ ಹಸು: ಮಹಿಳೆ ಪಾರು, ಹಸು ಬಲಿ

ದೊಡ್ಡಬಳ್ಳಾಪುರ (ಮೇ 31): ಕೇವಲ ಮೂರು ದಿನಗಳ ಅಂತರದಲ್ಲಿ ಎರಡು ಭಾರಿ ಚಿರತೆ ದಾಳಿ ನಡೆಸಿದ್ದು, ಚಿರತೆ ದಾಳಿ ವೇಳೆ ತನ್ನ‌ ಮಾಲಕಿಯನ್ನ ರಕ್ಷಿಸಲು ಹೋಗಿ ಚಿರತೆ ದಾಳಿಗೆ ಹಸು ಬಲಿಯಾಗಿರುವ ದಾರೂಣ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮೇಲಿನ ಯೋಗ ಈ ಘಟನೆ ನಡೆದಿದ್ದು ಗೌರಮ್ಮ ಎಂಬ ರೈತ ಮಹಿಳೆ ಹಸು ಮೇಯಿಸುತ್ತಿದ್ದರು. ಈ ವೇಳೆ ಏಕಾ ಏಕಿ ಚಿರತೆ ದಾಳಿ ನಡೆಸಲು ಮುಂದಾದಾಗ ಹಸು ಚಿರತೆ ದಾಳಿಗೆ ತುತ್ತಾಗಿ ತನ್ನ ಮಾಲಕಿ ರೈತ ಮಹಿಳೆ ಗೌರಮ್ಮಳನ್ನ ರಕ್ಷಿಸಿದೆ ಎನ್ನಲಾಗುತ್ತಿದೆ.

200 ಯುನಿಟ್ ವಿದ್ಯುತ್ ಉಚಿತಕ್ಕೆ ಷರತ್ತುಗಳ ಬಗ್ಗೆ ಇಂಧನ ಸಚಿವ ಕೆ.ಜೆ ಜಾರ್ಜ್ ಏನಂದ್ರು!?

ಚಿರತೆ ದಾಳಿ ಇಂದು ಮೊದಲೇನಲ್ಲ ಇದೇ ತಿಂಗಳ 29 ರಂದು ಮೇಲಿನಜೋಗನಹಳ್ಳಿ ಸಮೀಪದ ಹಿರೇಮುದ್ದೇನಹಳ್ಳಿಯಲ್ಲಿ ದಾಳಿ ಮಾಡಿತ್ತು, ದಿನ ಬಿಟ್ಟು‌ ದಿನಕ್ಕೆ ಅಕ್ಕಪಕ್ಕದ ಹಳ್ಳಿಗಳಲ್ಲಿ ಚಿರತೆ ದಾಳಿ ಹಿನ್ನಲೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಕೊರಗಜ್ಜನಲ್ಲಿ ಹರಕೆ ಮಾಡಿಕೊಂಡ ರಚಿತಾ: ಕೊರಗಜ್ಜ ಕ್ಷೇತ್ರಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಭೇಟಿ

ನಿರಂತರ ಚಿರತೆ ದಾಳಿಯಿಂದ ಭಯಭೀತರಾದ ಗ್ರಾಮಸ್ಥರುಗಳು ರೈತರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನ ಆಗ್ರಹಿಸಿದ್ದಾರೆ.

Related posts

Leave a Comment