ಗ್ರಾಮೀಣ ಪ್ರದೇಶದ ಜನರಿಗಾಗಿ ಡಯಾಲಿಸೀಸ್ ಕೇಂದ್ರ ಆರಂಭ

ನೆಲಮಂಗಲ: ಗ್ರಾಮೀಣ ಪ್ರದೇಶದಲ್ಲೂ ಜನರಲ್ಲಿ ಕಿಡ್ನಿ ಸಮಸ್ಯೆ ಕಂಡುಬರುತ್ತಿದ್ದು, ಡಯಾಲಿಸಿಸ್ ಸೇವಾ ಕೇಂದ್ರಗಳ ಅವಶ್ಯಕತೆ ಹೆಚ್ಚಿದೆ ಎಂದು ಸೋಂಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಕುಮಾರ್ ಅಭಿಪ್ರಾಯಪಟ್ಟರು.

ತಾಲೂಕಿನ ಸೋಂಪುರ ಹೋಬಳಿಯ ವಿ ಕೇರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವಾ ವಿಭಾಗಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ವೇಗದ ಒತ್ತಡದ ಜೀವನದಲ್ಲಿ ಹಲವಾರು ಖಾಯಿಲೆಗಳು ಯಾರಿಗೂ ಗೊತ್ತಾಗದ ರೀತಿ ದೇಹವನ್ನು ಅಕ್ರಮಿಸುತ್ತದೆ, ಕಿಡ್ನಿ ಸಮಸ್ಯೆ ಸಹ ಅದೇರೀತಿಯಾಗಿದೆ, ಡಯಾಲಿಸಿಸ್ ನಿಂದ ಕಿಡ್ನಿ ರೋಗಿಗಳಿಗೆ ತಾತ್ಕಾಲಿಕವಾಗಿ ಖಾಯಿಲೆ ದೂರಮಾಡಲು ಸಹಕಾರಿಯಾಗುತ್ತದೆ. ಸೋಂಪುರ ಹೋಬಳಿಯಲ್ಲಿ ಇದೀಗ ಈ ನೂತನ ವಿಭಾಗ ಪ್ರಾರಂಭವಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ, ಡಯಾಲಿಸಿಸ್ ಸೇವೆ ಆಯುಷ್ಮಾನ್ ಭಾರತ್, ಇ.ಎಸ್.ಐ. ಸೇರಿದಂತೆ ಇನ್ನೀತರ ವೈದ್ಯಕೀಯ ಸೇವಾ ವಿಮೆಯಿಂದ ಸಂಪೂರ್ಣ ಶುಲ್ಕದಲ್ಲಿ ವಿನಾಯಿತಿ ಇರುವುದು ಬಡವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.

ಇದನ್ನೂ ಓದಿ: ಎರಡು ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಪಿಡಿಒ

ಸೋಂಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಅಂಚೇಮನೆ ರುದ್ರಪ್ಪ ಕೇಂದ್ರಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಅಂಚೇಮನೆ ರಾಜಶೇಖರ್, ಡಾ.ಅಜಯ್, ದೊಡ್ಡೇರಿ ಪರಮೇಶ್, ಮ್ಯಾನೇಜರ್ ಭಾನುಶಾಲಿ ಇದ್ದರು.

Related posts

Leave a Comment