ಗೃಹಲಕ್ಷ್ಮಿ ಯೋಜನೆಗೆ ಮಾರ್ಗಸೂಚಿ ಬಿಡುಗಡಿ: ಯೋಜನೆಗೆ ಫಲಾನುಭವಿ ಆಯ್ಕೆ ಹೇಗೆ?

ಬೆಂಗಳೂರು: ರಾಜ್ಯ ಸರ್ಜಾರದ ಮಹತ್ವಾಕಾಂಕ್ಷಿ ಯೋಜನೆ ಹಾಗೂ ಚುನಾವಣೆಯಲ್ಲಿ ಮುಖ್ಯ ಪ್ರಣಾಳಿಕೆಯಾಸ ಗೃಹಲಕ್ಷಿ ಯೋಜನೆ ಅನುಷ್ಟಾನಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ಇಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರ ನೀಡಿದ್ದು ಸರ್ಕಾರ ನೀಡಿರೋ ಮಾರ್ಗಸೂಚಿ ಪ್ರಕಾರ ಯೋಜನೆಗೆ ಕುಟುಂಬದ ಯಜಮಾನಿ ಮುಖ್ಯಸ್ಥೆಯಾಗಿರುತ್ತಾರೆ. ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿದಾಗಿರುವ ಮಹಿಳೆ ಈ ಯೋಜನೆಗೆ ನೇರ ಫಲಾನುಭವಿ ಆಗಲಿದ್ದಾರೆ.

ಒಂದೇ ಕುಟುಂಬದಲ್ಲಿ ಅಥವಾ ಒಂದು ಪಡಿತರ ಚೀಟಿಯಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಆ ಪಡಿತರ ಚೀಟಿ ಅಥವಾ ಕುಟುಂಬದಲ್ಲಿ ಒಂದು ಮಹಿಳೆಗೆ ಮಾತ್ರ ಅವಕಾಶ, ಅದರಲ್ಲೂ ಕುಟುಂಬದ ಯಜಮಾನಿ ಎಂದು ನಮೂರಾಗಿರುವ ಮಹಿಳೆ ಈ ಯೋಜನೆಗೆ ಅರ್ಹಳಾಗಿರುತ್ತಾಳೆ

ಸರ್ಕಾರದ ಮಾರ್ಗಸೂಚಿಯ ಪ್ರಕಾರ ಅರ್ಹ ಫಲಾನುಭವಿಗಳು ಜೂನ್ ೧೫ ರಿಂದ ಜುಲೈ ೧೫ ರ ಒಳಗೆ ಅರ್ಜಿ ಸಲ್ಲಿಸಲ ಬೇಕಾಗಿದ್ದು, ಜುಲೈ 15 ರಿಂದ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಆಗಸ್ಟ್ 15 ಕ್ಕೆ ಅರ್ಹ ಫಲಾನುಭವಿಗಳ ಖಾತೆಗೆ ಮೊದಲ ಕಂತಿನ 2000 ಹಣ ನೇರ ವರ್ಗಾವಣೆ ಆಗಲಿದೆ.

ಸೇವಾಸಿಂಧು ಪೋರ್ಟಲ್ ಮೂಲಕವಾಗಲಿ ಅಥವಾ ಭೌತಿಕವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿದ್ದಲ್ಲಿ ಶಿಸ್ತುಕ್ರಮ ಎಚ್ಚರಿಕೆ‌ಯನ್ನು ಸರ್ಕಾರ ನೀಡಿದ್ದು ಹಣ ವಾಪಸ್ ಪಡೆಯಲಾಗುವ ನಿಯಮ ಸಹ ಜಾರಿಯಲ್ಲಿರುತ್ತದೆ.

ಈ ಸೇವೆಯ ಫಲಾನುಭವಿ ಆಗಿರುವವರು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ‌. ಒಂದು ವೇಳೆ ಮನೆ ಯಜಮಾನಿ ಗಂಡ ಐಟಿ ರಿಟರ್ನ್ಸ್ ಹಾಗೂ ಜಿಎಸ್ ಟಿ ರಿಟರ್ಸ್ ಮಾಡಿದ್ದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಹವಾಗಿರೋದಿಲ್ಲ

Related posts

Leave a Comment