ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್ ಅಹಿಂಸಾಗೆ ಹೈಕೋರ್ಟ್ ಮತ್ತೆ ಬಿಗ್ ರಿಲೀಫ್

ಬೆಂಗಳೂರು (ಜೂ. 2): ನಟ ಚೇತನ್ ಗೆ ನೀಡಿದ್ದ ಒಸಿಐ ಮಾನ್ಯತೆ ರದ್ದು ಮಾಡಿದ ವಿಚಾರದಲ್ಲಿ ಜೂನ್.20 ರವರೆಗೆ ತಡೆಯಾಜ್ಞೆ ಹೈಕೋರ್ಟ್ ವಿಸ್ತರಿಸಿದೆ. 2018 ರಲ್ಲಿ ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ಪಡೆದು ಚೇತನ್ ಭಾರತದಲ್ಲಿ ವಾಸಿಸುತ್ತಿದ್ದರು.

ಈ ವೇಳೆ ಅನೇಕ ಕ್ರಾಂತಿಕಾರಿ ಚಟುವಟಿಕೆಗಳನ್ನ ಚೇತನ್ ಅಹಿಂಸಾ ರಾಜ್ಯದಲ್ಲಿ ಹಮ್ಮಿಕೊಂಡಿದ್ದರು. ಈ ರೀತಿಯ ಕ್ರಾಂತಿಕಾರಿ ಚಟುವಟಿಕೆಗಳ ವಿಚಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ, ಭಾರತ ವಿರೋಧಿ ಚಟುವಟಿಕೆ ಆರೋಪಗಳು ಕೇಳಿ ಬಂದ ಹಿನ್ನೆಲೆ ಕೇಂದ್ರ ಸರ್ಕಾರ ನಟ ಚೇತನ್ ಅಹಿಂಸಾಗೆ ನೋಟೀಸ್ ನೀಡಿ ಉತ್ತರ ಪಡೆದಿತ್ತು

ಚೇತನ್ ಉತ್ತರ ಸಮಾಧಾನಕಾರವಿಲ್ಲ‌ ಎಂದು ಕೇಂದ್ರ ನಟ ಚೇತನ್ ಪಡೆದಿದ್ದ ಒಸಿಐ ಕಾರ್ಡ್ ರದ್ದು ಮಾಡಿತ್ತು. ಇದನ್ನು ಹೈಕೋರ್ಟ್ ನಲ್ಲಿ ನಟ ಚೇತನ್ ಪ್ರಶ್ನಿಸಿದ್ದರು, ಏ.21 ರಂದು ಚೇತನ್‌ಗೆ ಹೈಕೋರ್ಟ್ ಷರತ್ತುಬದ್ದ ರಿಲೀಫ್ ನೀಡಿ ಚೇತನ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿತ್ತು.

ನಟ ಚೇತನ್ ಗೆ ನೀಡಿದ್ದ ಒಸಿಐ ಮಾನ್ಯತೆ ರದ್ದು ಮಾಡಿದ ವಿಚಾರದಲ್ಲಿ ಜೂನ್.20 ರವರೆಗೆ ತಡೆಯಾಜ್ಞೆ ಹೈಕೋರ್ಟ್ ವಿಸ್ತರಿಸಿದೆ.

Related posts

One Thought to “ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್ ಅಹಿಂಸಾಗೆ ಹೈಕೋರ್ಟ್ ಮತ್ತೆ ಬಿಗ್ ರಿಲೀಫ್”

Leave a Comment