ಕ್ಯಾನ್ಸರ್ ಕಾರಣದಿಂದ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ಸಾವು – Digital Varthe

ಬೆಂಗಳೂರು: ಕ್ಯಾನ್ಸರ್ ಕಾರಣದಿಂದ ಬೆಂಗಳೂರಿನಲ್ಲಿ ಮತ್ತೋಂದು ಸಾವಿನ‌ ಪ್ರಕರಣ‌ ದಾಖಲಾಗಿದೆ, ಅಶೋಕನಗರ ಸಂಚಾರಿ ಠಾಣೆಯ ಹೆಡ್ ಕಾನ್ಸ್‌ಟೆಬಲ್ ಕುಮಾರ್ ತಾನು ವಾಸವಿದ್ದ ಕ್ವಾಟ್ರಸ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌

ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಕುಮಾರ್  ನನ್ನಿಂದ ಮಗಳಿಗೂ ಕಾಯಿಲೆ ಹರಡಿದೆ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಮಾರ್‌ರಿಂದ ತಮ್ಮ ಮಗಳಿಗೂ ಕ್ಯಾನ್ಸರ್ ರೋಗ ಹರಡಿತ್ತು ಎನ್ನಲಾಗುತ್ತಿದೆ, ತಾನು ಚಿಕಿತ್ಸೆ ಪಡೆಯೋ ಜೊತೆಯಲ್ಲಿ ಸಹ ಮಗಳಿಗೆ ಟ್ರೀಟ್ಮೆಂಟ್ ಕೊಡಿಸಿದ್ದರು. ಕುಮಾರ್ ಮಗಳು ಇತ್ತೀಚೆಗೆ ಚೇತರಿಸಿಕೊಳ್ಳುತ್ತಿದ್ದರು.ಆದರು ಸಹ ನನ್ನಿಂದಲೇ ಮಗಳಿಗೆ ಕ್ಯಾನ್ಸರ್ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸದ್ಯ ಮೃತದೇಹದ ಅಂತ್ಯಕ್ರಿಯೆಯನ್ನು ಕುಟುಂಬಸ್ಥರ ನಿರ್ಧಾರದಂತೆ ದಾವಣಗೆರೆ ಜಿಲ್ಲೆ ಚೆನ್ನಗಿರಿಗೆ ತೆಗೆದುಕೊಂಡು ಹೋಗಲಾಗಿದೆ.

Related posts

Leave a Comment