ಕೊರಗಜ್ಜನಲ್ಲಿ ಹರಕೆ ಮಾಡಿಕೊಂಡ ರಚಿತಾ: ಕೊರಗಜ್ಜ ಕ್ಷೇತ್ರಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಭೇಟಿ

ಮಂಗಳೂರು (ಮೆ. 31): ಮಂಗಳೂರು ಹೊರವಲಯದ ಕುತ್ತಾರಿನಲ್ಲಿರುವ ಕೊರಗಜ್ಜ  ಕ್ಷೇತ್ರಕ್ಕೆ ಸ್ಯಾಂಡಲ್ ವುಡ್ ಬೆಡಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಭೇಟಿ ನೀಡಿ ಕೊರಗಜ್ಜನ ಆಶಿರ್ವಾದ ಪಡೆದಿದ್ದಾರೆ.

ಮುಂಬರುವ ಚಿತ್ರಗಳಾದ ಮ್ಯಾಟ್ನಿ, ಬ್ಯಾಡ್ ಮ್ಯಾನರ್ಸ್, ಸೇರಿದಂತೆ ಹಲವು ಚಿತ್ರಗಳ ಯಶಸ್ಸಿಗೆ ನಟಿ ರವಿತಾ ರಾಮ್ ಪ್ರಾರ್ಥನೆ ಸಲ್ಲಿಸಿದ್ದಾರೆ.

ಕೊರಗಜ್ಜ ಕ್ಷೇತ್ರದ ಭೇಟಿ ಬಳಿಕ ನಟಿ ರಚಿತಾ ರಾಮ್ ಮಾತನಾಡಿ ನನ್ನ ಸ್ನೇಹಿತರೆಲ್ಲರೂ ಕೊರಗಜ್ಜ ದೈವದ ಕಾರಣೀಕದ ಬಗ್ಗೆ ಹೇಳಿದ್ರು ಹಾಗಾಗಿ ನನಗೂ ಕೊರಗಜ್ಜ ದೈವದಲ್ಲಿ ಭಕ್ತಿಯಿಂದ ಪ್ರಾರ್ಥಿಸಬೇಕು ಅನ್ನಿಸಿತು.

ಈ ಕ್ಷೇತ್ರ ಪ್ರಾಕೃತಿಕ ಸೌಂದರ್ಯವನ್ನು ಒಳಗೊಂಡು ತುಂಬಾ ಚೆನ್ನಾಗಿದೆ ನನ್ನ ಮುಂಬರುವ ಚಿತ್ರಗಳ ಬಗ್ಗೆ ಪ್ರಾರ್ಥಿಸಿದ್ದೇನೆ, ಕುತ್ತಾರು ಕೊರಗಜ್ಜ ಕ್ಷೇತ್ರದಲ್ಲಿ ನಟಿ ರಚಿತಾ ರಾಮ್ ಹೇಳಿಕೆ.

Related posts

One Thought to “ಕೊರಗಜ್ಜನಲ್ಲಿ ಹರಕೆ ಮಾಡಿಕೊಂಡ ರಚಿತಾ: ಕೊರಗಜ್ಜ ಕ್ಷೇತ್ರಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಭೇಟಿ”

Leave a Comment