ಕೆಡಬ್ಲ್ಯೂ ಜೆವಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ವೀರಸಾಗರ ಭಾನುಪ್ರಕಾಶ್. ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ನೇಮಕ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ( ಕೆ ಡಬ್ಲ್ಯೂ ಜೆ ವಿ ) ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ವೀರ ಸಾಗರ ಭಾನುಪ್ರಕಾಶ್ ಪ್ರಧಾನ ಕಾರ್ಯದರ್ಶಿಯಾಗಿ ಬಿ. ಕೆ ಮಹೇಶ್ ರವರ ಅಮೂಲಾಗ್ರ ಸಂಘಟನಾತ್ಮಕ ಸೇವೆಯನ್ನು ಗಮನಿಸಿ ಕೆಡಬ್ಲ್ಯೂ ಜೆ ವಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಹಾಗೂ ರಾಜ್ಯ ಪದಾಧಿಕಾರಿಗಳ ಒಮ್ಮತದ ಮೇರೆಗೆ ಆಯ್ಕೆ ಮಾಡಲಾಯಿತು. ತಮ್ಮ ಅವಧಿಯಲ್ಲಿ ಪತ್ರಕರ್ತರನ್ನು ಸಂಘಟಿಸುವುದರ ಜೊತೆಯಲ್ಲಿ ಅವರ ಮೂಲಭೂತ ಹಕ್ಕುಗಳು ಹಾಗೂ ಅವರ ಕಾರ್ಯನಿರ್ವಹಿಸುವಾಗ ಎದುರಾಗುವ ಸಮಸ್ಯೆಗಳಿಗೆ ಧ್ವನಿ ಯಾಗಬೇಕು ಎಂದು ಸೂಚಿಸಿದ್ದಾರೆ.

Read This: 2 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಬಿದ್ದ ಪಿಡಿಓ

ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಆ ದಿನಗಳು ಮಾಸಪತ್ರಿಕೆಯ ಸಂಪಾದಕರಾದ ವೀರಸಾಗರ ಬಾನು ಪ್ರಕಾಶ್ ಮಾತನಾಡಿ ನನ್ನನ್ನು ಆಯ್ಕೆ ಮಾಡಿದ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳಿಗೆ ಅಭಾರಿಯಾಗಿದ್ದೇನೆ ಎಂದರು.

Related posts

One Thought to “ಕೆಡಬ್ಲ್ಯೂ ಜೆವಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ವೀರಸಾಗರ ಭಾನುಪ್ರಕಾಶ್. ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ನೇಮಕ”

Leave a Comment