ಕುತ್ತಿಗೆಗೆ ಚಾಕುವಿನಿಂದ ಇರಿದು ದರೋಡೆ ಮಾಡಿದ್ದ ಆರೋಪಿಗಳ ಬಂಧನ

ನೆಲಮಂಗಲ: ವ್ಯಕ್ತಿಯೊಬ್ಬನ್ನು ಬಳಿ ಕಿತ್ತುಕೊಂಡು ಚಾಕುವಿನಿಂದ ಹಿರಿದು ಮೊಬೈಲ್ ಕಸಿದು ಪರಾರಿಯಾಗಿದ್ದ ಮೂರು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರು ಪೀಣ್ಯ ನಿವಾಸಿಗಳಾದ ತೇಜಸ್(೨೬). ಸನ್ಮಾಲ್(೨೫), ತಾಲೂಕಿನ ಟಿ.ಬೇಗೂರು ಗ್ರಾಮದ ನಿವಾಸಿ ಚಾನ್‌ಪಾಷ್ (೨೩) ಬಂಧಿತ ಆರೋಪಿಗಳು.

ಏನಿದು ಘಟನೆ: ಜೂ.೧೦ರಂದು ನಗರದ ಕೂಲಿಪುರ ಗ್ರಾಮದ ನಿವಾಸಿ ಬಸವರಾಜು ಎಂಬಾತ ಕೆಲಸ ಮುಗಿಸಿಕೊಂಡು ಮನೆಗೆ ತೆರುಳುತ್ತಿದ್ದ ವೇಳೆ ಮಾರ್ಗಮದ್ಯದ ತಾಲೂಕಿನ ಗಂಗಾಧರನಪಾಳ್ಯ ಬಳಿಯ ೩ ಮಂದಿ ದುಷ್ಕರ್ಮಿಗಳು ಮೊಬೈಲ್‌ಕಿತ್ತುಕೊಂಡಿದ್ದರು. ಪ್ರಶ್ನೆ ಮಾಡಿದಕ್ಕೆ ವ್ಯಕ್ತಿಯೊಬ್ಬ ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಹಿರಿದು ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸ್ನೇಹಿತ ಶಶಿಕುಮಾರ್ ಎಂಬಾತ ಬಸವರಾಜು ಗಂಭೀರವಾಗಿ ಗಾಯಗೊಂಡಿದನ್ನು ಕಂಡು ತಕ್ಷಣ ನಗರದ ಜಯಪ್ರಸಾದ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಬಿನ್ನಮಂಗಲ ಬಳಿಕ ವಿ.ಪಿ.ಮ್ಯಾಗ್ನಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪರಾಗಿದ್ದರು. ಬಳಿಕ ಜೂ.೧೧ರಂದು ಬಸವರಾಜು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ದೂರು ದಾಖಸಿಕೊಂಡ ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಾಜೀವ್ ನೇತೃತ್ವದ ಸಿಬ್ಬಂದಿಗಳ ತಂಡ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದರು.

ಸಿನಿಮೀಯ ರೀತಿ ಬಂಧನ: ಮೊಬೈಲ್ ನೆಟ್‌ವರ್ಕ ಆಧಾರವಾಗಿಟ್ಟುಕೊಂಡ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಬೆಂಗಳೂರು ವಿವಿಧ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿ ಬಳಿಕ ಜೂ.೧೯ರಂದು ಬೆಳಗಿನ ಜಾವ ಬೆಂಗಳೂರಿನ ಪೀಣ್ಯ ಸ್ಲಾಂನಲ್ಲಿ ೩ ಮಂದಿ ಆರೋಪಿಗಳನ್ನು ಸಿನಿಮೀಯ ರೀತಿ ಬಂಧಿಸಿದ್ದಾರೆ.

ಬAಧಿತ ವ್ಯಕ್ತಿಗಳಿಂದ ೫ ಮೊಬೈಲ್ ಹಾಗೂ ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಆರೋಪಿ ತೇಜಸ್ ಮೇಲೆ ೧೩ ಪ್ರಕರಣಗಳಿದ್ದು ರಾಜಗೋಪಾಲ್‌ನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಆರೋಪಿ ಸನ್ಮಾಲ್ ಮೇಲೆ ೨ ಪ್ರಕರಣಗಳಿದ್ದು ಆರ್‌ಎಂಸಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಆರೋಪಿ ಚಾನ್‌ಪಾಷ್ ಮೇಲೆ ಕ್ಯಾತಸಂದ್ರ ಹಾಗೂ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಪೊಲೀಸ್ ವರಿಷ್ಠಾಧಿಕಾರಿಗಳಿಂದ ಶ್ಲಾಘನೆ : ಡಿವೈಎಸ್‌ಪಿ ಗೌತಮ್ ಮಾರ್ಗದರ್ಶನ, ಗ್ರಾಮಾಂತರ ಠಾಣೆ ಇನ್ಸಪೆಕ್ಟರ್ ರಾಜೀವ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಾಲಾಜಿಸಿಂಗ್, ಸುನೀಲ್, ಕೃಷ್ಣಮೂರ್ತಿ, ದಿನೇಶ್, ಚನ್ನಬಸಪ್ಪನನ್ನು ಒಳಗೊಂಡAತೆ ಅರೋಪಿಗಳನ್ನು ಪತ್ತೆ ಹಚ್ಚಿರುವ ವಿಶೇಷ ತಂಡವನ್ನು ಯಶಸ್ವಿಯಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

Related posts

Leave a Comment