ಕುಖ್ಯಾತ ಅಂತರ್‌ರಾಜ್ಯ ಕಳ್ಳರನ್ನ ವಶಪಡಿಸಕೊಂಡ ನೆಲಮಂಗಲ ಪೊಲೀಸರು

ನೆಲಮಂಗಲ: ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಮಂದಿ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ನಗರ ಪೊಲೀಸ್ ಠಾಣೆ ಪೊಲೀಸರು ಯಶಸ್ಸಿಯಾಗಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಭದ್ರಾಪುರ ಗ್ರಾಮದ ನಿವಾಸಿ ಚಂದ್ರಶೇಖರ್(೨೭), ಚಿಕ್ಕಮಂಗಳೂರು ಜಿಲ್ಲೆಯ ದುಬೈನಗರ ನಿವಾಸಿ ಯತೀಶ್(೨೬) ಬಂಧಿತ ಆರೋಪಿಗಳು.

ಏನಿದು ಘಟನೆ: ಕಳೆದ ೩ ತಿಂಗಳ ಹಿಂದೆ ನಗರ ಬಸ್ ನಿಲ್ದಾಣ ಬಳಿ ನಿಲ್ಲಿಸಿದ್ದ ದ್ವಿಚಕ್ರವಾಹನ ಕಳ್ಳತನ ವಾಗಿದ್ದು ದ್ವಿಚಕ್ರವಾಹನ ಮಾಲೀಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಇತ್ತೀಚೆಗೆ ನಗರಸಭೆ ವ್ಯಾಪ್ತಿಯ ಅರಿಶಿನಕುಂಟೆ ಗ್ರಾಮದ ಬಳಿ ಕಳ್ಳತನ ಮಾಡಿದ್ದ ಬೈಕ್‌ನಲ್ಲಿ ಸಂಚಾರ ಮಾಡುತ್ತಿದ್ದ ವೇಳೆ ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಶಶಿಧರ್ ನೇತೃತ್ವದ ಪೊಲೀಸ್ ಸಿಬ್ಬಂದಿಗಳ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಬೈಕ್ ವಶಪಡಿಸಿಕೊಂಡಿದ್ದಾರೆ.

ವಿವಿಧ ಪ್ರಕರಣಗಳು ಬೆಳಕಿಗೆ: ಬಂಧಿತ ಆರೋಪಿಗಳನ್ನು ವಿಚಾರ ನಡೆಸಿದಾಗ ನಗರ ಪೊಲೀಸ್ ಠಾಣೆಯಲ್ಲಿ ೨ ಪ್ರಕರಣ ಹಾಗೂ ಮಾದನಾಯನಹಳ್ಳಿ ಪೊಲೀಸ್ ಠಾಣೆಯಲ್ಲಿ ೩ ಕಳ್ಳತನ ಪ್ರಕರಣಗಳನ್ನು ನಡೆಸಿದ್ದು ಬೆಳಕಿಗೆ ಬಂದಿದೆ. ಬಂಧಿತರಿಂದ ಕಾರು, ಆಟೋ, ಲ್ಯಾಪ್‌ಟಾಪ್, ೨ ಮೊಬೈಲ್, ೨ ಬೈಕ್ ಸೇರಿದಂತೆ ೨೦ಗ್ರಾಂ ಚಿನ್ನಾಭರಣ, ೩.೩.ಕೆಜಿ ಬೆಳ್ಳಿ ವಸ್ತುಗಳು, ಮಚ್ಚು, ರಾಡ್ ಸೇರಿದಂತೆ ಸುಮಾರು ೧೧.೭೦ಲಕ್ಷ ಮೌಲ್ಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಜೈಲಿನಲ್ಲಿ ಸ್ನೇಹ: ಕಳೆದ ನಾಲ್ಕೈದು ವರ್ಷಗಳ ಹಿಂದೆ ಅಪರಾಧ ಕೃತ್ಯವೊಂದರಲ್ಲಿ ಜೈಲಿಗೆ ಹೋಗಿದ್ದ ಚಂದ್ರಶೇಖರ್‌ಗೆ ಯತೀಶ್ ಪರಿಚಯವಾಗಿದ್ದು ಪರಿಚಯ ಸ್ನೇಹವಾಗಿದ್ದು ಜೈಲಿನಿಂದ ಹೊರ ಬಂದ ಇಬ್ಬರು ಒಟ್ಟಿಗೆ ಕಳ್ಳತನ ಮಾಡುತ್ತಿದ್ದರು. ಬೆಂಗಳೂರು ನಗರ, ಗ್ರಾಮಾಂತರ, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಸುಮಾರಿ ೨೦ಕ್ಕೂ ಹೆಚ್ಚು ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ್ ಮೇಲೆ ೪೨ ಪ್ರಕರಣ ಹಾಗೂ ಯತೀಶ್ ಮೇಲೆ ೩೯ ಪ್ರಕರಣಗಳಿದೆ.

ಸುಳಿವು ನೀಡಿದ ಸಿಸಿಟಿವಿ ಕ್ಯಾಮಾರಾ : ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಪೊಲೀಸರಿಗೆ ಆರೋಪಿಗಳ ಕಳ್ಳತನ ನಡೆದ ಸ್ಥಳದಲ್ಲೇ ಸಿಸಿಟಿಯಲ್ಲಿ ಸೆರೆಯಾಗಿದ್ದು ದೃಶ್ಯಗಳನ್ನು ಇಟ್ಟುಕೊಂಡು ಆರೋಪಿಗಳ ಚಲನವಲನಗಳನ್ನು ನಿಗಾವಹಿಸಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ವರಿಷ್ಠಾಧೀಕಾರಿಗಳಿಂದ ಶ್ಲಾಘನೆ : ಡಿವೈಎಸ್‌ಪಿ ಗೌತಮ್ ಮಾರ್ಗದರ್ಶನ, ನಗರ ಠಾಣೆ ಇನ್ಸಪೆಕ್ಟರ್ ಶಶಿಧರ್ ನೇತೃತ್ವದಲ್ಲಿ ಎಸ್‌ಐ ಜಯಂತಿ, ವರಲಕ್ಷ್ಮಿ ಪ್ರೊಬೇಷನರಿ ಎಸ್‌ಐ ಶಮಂತ್‌ಗೌಡ, ಎಎಸ್‌ಐ ಬಿ.ಎಸ್.ರಘು ಸಿಬ್ಬಂದಿಗಳಾದ ಕೇಶವ್‌ಮೂರ್ತಿ, ಬಸವರಾಜು, ಹರೀಶ್, ಫಕ್ರುಸಾಬ್ ಪಠಾಣ್, ರಮೇಶ್‌ಸುತಾರ್, ಮಹಮದ್‌ಜುಬೇರ್‌ನನ್ನು ಒಳಗೊಂಡAತೆ ಅರೋಪಿಗಳನ್ನು ಪತ್ತೆ ಹಚ್ಚಿರುವ ವಿಶೇಷ ತಂಡವನ್ನು ಯಶಸ್ವಿಯಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

Related posts

Leave a Comment