ಕವಿತೆ: ವನಿತೆ ಜಗದ ತೋರಣ – ಮಣ್ಣೆ ಮೋಹನ್

ಎಲೆಯ ಮರೆಯ ಕುಸುಮ ಬಿರಿದು
ಪರಿಮಳವ ಸೂಸುತ್ತಿದೆ
ಎಳೆಯ ಹರೆಯ ಚೆಲುವೆ ನಲಿದು
ಅನುರಾಗವು ಹಾಸುತ್ತಿದೆ

ಕುಸುಮ ಸುಗಂಧದ ಘಮಘಮಕೆ
ನಿಸರ್ಗಾಲಯವೇ ಆನಂದ
ಚೆಲುವೆ ಸೌಂದರ್ಯದ ಅನುರಾಗಕೆ
ಪುರುಷಕುಲವೇ ಅನುಬಂಧ

ಮಕರಂದದ ಮಾಧುರ್ಯಕೆ
ದುಂಬಿ ನಾದ ರಿಂಗಣ
ಚೆಲುವೆಯ ಮಾರ್ದವತೆಗೆ
ಮನುಕುಲವೇ ತಲ್ಲಣ

ಚೆಲುವಿನಿಂದ ಮಿನುಗು ಹೂವು
ನಿಸರ್ಗ ದೇವಿಯ ಆಭರಣ
ಜಗದ ಚೆಲುವ ಧರಿಸಿ ಮೆರೆವ
ವನಿತೆ ಜಗದ ತೋರಣ

–ಮಣ್ಣೆ ಮೋಹನ್

ಲೇಖಕರಾದ ಮಣ್ಣೆ ಮೋಹನ್‌ ರಚಿತ ಕವಿತೆ “ನನ್ನವಳು”‌ ಓದಲು ಕ್ಲಿಕ್‌ ಮಾಡಿ

Related posts

Leave a Comment