ಕವಿತೆ: ನೆನಪು, ಲೇಖಕರು: ಮಣ್ಣೆ ಮೋಹನ್

ನೆನಪು

ಮಳೆಯ ಹನಿಯು ನಿಂತರು
ಮರದ ಹನಿಯು ನಿಲ್ಲದಂತೆ/
ನೀನು ದೂರ ಹೋದರು
ನಿನ್ನ ನೆನಪು ಬೆಲ್ಲದಂತೆ//

ಹನಿಯನೊತ್ತ ಮರಕೀಗ
ಸಂಭ್ರಮದ ಝಳಕ/
ನೆನಪನ್ನೊದ್ದ ನನ್ನ ಮನಕೆ
ಸಂತಸದ ಪುಳಕ//

ಹನಿಯನೊದ್ದ ಎಲೆಗಳು
ಎಷ್ಟೊಂದು ಸುಂದರ/
ನೆನಪ ಅಲೆಯ ಭಾವಗಳು
ಎಂದೆಂದಿಗೂ ಮಧುರ//

ಮರದ ಹನಿಯು ಬಿದ್ದ ಮೇಲೆ
ಮರದ ಭಾರವೆಲ್ಲ ಹಗುರ/
ನಿನ್ನ ನೆನಪು ಹೋದ ಗಳಿಗೆ
ನನ್ನ ಹೃದಯ ಬಲು ಭಾರ//

–ಮಣ್ಣೆ ಮೋಹನ್

Related posts

One Thought to “ಕವಿತೆ: ನೆನಪು, ಲೇಖಕರು: ಮಣ್ಣೆ ಮೋಹನ್”

Leave a Comment