ಉಚಿತ ಬಸ್ ಪ್ರಯಾಣಕ್ಕೆ ಮಾರ್ಗಸೂಚಿ : ಮಾರ್ಗಸೂಚಿ ಬೆನ್ನಲ್ಲೆ ಪ್ರಯಾಣಿಕರಿಗೆ ಶಾಕ್ – Digital Varthe

ಬೆಂಗಳೂರು: ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆ ಹೆಸರಿನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಮಾರ್ಗಸೂಚಿ ಹೊರಡಿಸಿದೆ.

ಜೂನ್ 11ರಿಂದ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಕರ್ನಾಟಕಾದ್ಯಂತ ಉಚಿತ ಪ್ರಯಾಣಕ್ಕೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು ಬಿಎಂಟಿಸಿ ಸೇರಿ ಎಲ್ಲಾ ಸಾರಿಗೆ ಸಂಸ್ಥೆಗಳಿಗೆ ಸರ್ಕಾರದಿಂದ ಆದೇಶ ಹಾಗೂ ನಿಬಂಧನೆಗಳನ್ನ ಹೊರಡಿಸಿದೆ.

ಶಕ್ತಿ ಯೋಜನೆಯಲ್ಲಿ ರಾಜಹಂಸ, ಐಷಾರಾಮಿ, ಎಸ್ ಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ಬದಲಿಗೆ ಸಾಮಾನ್ಯ ಸಾರಿಗೆ, ವೇಗದೂತಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

ಶಕ್ತಿ ಯೋಜನೆಯ ಫಲಾನುಭವಿ ಮಹಿಳೆಯರು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಶಕ್ತಿ ಸ್ಮಾರ್ಟ್ ಬರೋವರೆಗೆ ಸರ್ಕಾರಿ ಗುರುತಿನ ಚೀಟಿ ಕಂಡೆಕ್ಟರ್ ಗೆ ತೋರಿಸೋದು ಕಡ್ಡಾಯ ಗೊಳಿಸಲಾಗಿದೆ.

ರಾಜ್ಯ ಸರ್ಜಾರದ ಸಾರಿಗೆ ಸಂಸ್ಥೆಗಳಲ್ಲಿ ರಾಜ್ಯದ ಒಳಗೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶವಿದ್ದು ಈ ಯೋಜನೆ ಯ ಮೊತ್ತವನ್ನು ಸರ್ಕಾರವೇ ಭರಿಸುತ್ತದೆ. ಹೀಗಾಗಿ ಕಂಡೆಕ್ಟರ್ ಮಹಿಳಾ ಪ್ರಯಾಣಿಕರಿಗೆ ಪ್ರಯಾಣದ ಚೀಟಿಯನ್ನು ನೀಡುವುದು ಕಡ್ಡಾಯ, ಶೂನ್ಯ ಮೊತ್ತದ ಪ್ರಯಾಣದ ಸೌಕರ್ಯದ ಚೀಟಿ ನೀಡಬೇಕು.

ಮಹಿಳಾ ಪ್ರಯಾಣಿಕರು ಹೆಚ್ಚುವರಿ ಲಗೇಜ್ ಕೊಂಡುಹೋದಲ್ಲಿ ಅದರ ಮೊತ್ತವನ್ನು ಪಾವತಿ ಮಾಡಬೇಕು, ಅಂತರ ರಾಜ್ಯ ಸಾರಿಗೆಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ.

ಮಹಿಳಾ ಪ್ರಯಾಣಿಕರೊಂದಿಗೆ ಚಾಲಕರು, ನಿರ್ವಾಹಕರು‌ ಸೌಜನ್ಯದಿಂದ ವರ್ತಿಸಬೇಕು
ಉಚಿತ ಪ್ರಯಾಣದಲ್ಲಿ 6 ರಿಂದ 8 ವರ್ಷದ ಮಕ್ಕಳೂ ಒಳಗೊಂಡಿರುತ್ತಾರೆ.

ಸಾಂಧರ್ಭಿಕ‌ ಒಪ್ಪಂದ ಖಾಯಂ ಗುತ್ತಿಗೆಗೆ ಉಚಿತ ಪ್ರಯಾಣ ಅನ್ವಯವಾಗುವುದಿಲ್ಲ
ಬಸ್ ಸ್ಟಾಪ್ ಗಳಲ್ಲಿ ಮಹಿಳೆಯರನ್ನು ಹತ್ತಿಸಿಕೊಳ್ಳುವುದು ಕಡ್ಡಾಯ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Related posts

Leave a Comment