ಅಂಬೇಡ್ಕರ್ ಅನ್ನುವ ಹೆಸರು ಬ್ರಾಹ್ಮಣ ಶಿಕ್ಷಕನ ಕೊಡುಗೆನಾ? ಈ ಬಗ್ಗೆ ರಾಜರತ್ನ ಅಂಬೇಡ್ಕರ್ ಏನಂದ್ರು

ಬಾಬಾ ಸಾಹೇಬ್ ಭೀಮ್ ರಾವ್ ರಾಮ್‌ಜಿ ಅಂಬೇಡ್ಕರ್ ಅವರಿಗೆ ಅಂಬೇಡ್ಕರ್ ಎನ್ನುವ ಹೆಸರು ಬಂದದ್ದು ಅವರ ಶಿಕ್ಷಕರು ಇಟ್ಟ ಹೆಸರು ಎಂದು ನಾವು ಇಷ್ಟು ದಿನ ತಿಳಿದಿದ್ದೊ, ಇತಿಹಾಸಜಾರರು ಸಹ ನಮಗೆ ಅದನ್ನೆ ಹೇಳಿದ್ದರು, ಆದ್ರೆ ಅದು ನಿಜವಾದ ಸತ್ಯ ಅಲ್ಲ ಅಂತಾ ಹೇಳ್ತಿದ್ದಾರೆ ಅಂಬೇಡ್ಕರ್ ವಂಶಸ್ಥರಾದ ರಾಜರತ್ನ ಅಂಬೇಡ್ಕರ್.

ರಾಜರತ್ನ ಅಂಬೇಡ್ಕರ್ ಅವರು ಬರೆದ ಒಂದು ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ.

ಇಲ್ಲ ಖಂಡಿತವಾಗಿಯೂ ಇಲ್ಲ.ಇದು ಬಾಬಾಸಾಹೇಬರ ಮತ್ತು ಆನಂದರಾವ್ ತಂದೆ ಸುಬೆದಾರ್ ಮೇಜರ್ ರಾಮಜಿ ಸಕ್ತ್ಪಾಲ್ (ಅಂಬೇಡ್ಕರ್) ಅವರ ಕೊಡುಗೆ ಆಗಿದೆ.

ನನಗೆ (ರಾಜ ರತ್ನ ಅಂಬೇಡ್ಕರ್ )1950 ಕ್ಕಿಂತ ಮುಂಚಿನ ಕೆಲವು ದಾಖಲೆಗಳು ಬೇಕಾಗಿದ್ದವು.ಆದ್ದರಿಂದ ನಾನು 7 ಸೆಪ್ಟೆಂಬರ್ 2022 ರಂದು ನನ್ನ ಮುತ್ತಾತ ಆನಂದರಾವ್ ಮತ್ತು ಭೀಮರಾವ್ ಅಂದ್ರೆ,ವಿಶ್ವ ರತ್ನ ಬೋಧಿಸತ್ವ ಡಾ. ಭೀಮರಾವ್ ರಾಮಜಿ ಅಂಬೇಡ್ಕರ್ ಅವರು ಯಾವ ಶಾಲೆಯಲ್ಲಿ ಕಲಿತಿದ್ದರೋ, ಅಲ್ಲಿಗೆ ಹೋಗಿದ್ದೆ.
   ಅಲ್ಲಿಗೆ ಹೋದ ಮೇಲೆ ತಿಳಿದು ಬಂದದ್ದು ಏನಂದ್ರೆ,ಬಾಬಾಸಾಹೇಬರ ಸ್ಕೂಲ್ ರೆಕಾರ್ಡ್ ದಿಂದ ಇಲ್ಲಿಯವರೆಗೆ ಅವರ school living certificate ತಯಾರಾಗೆ ಇಲ್ಲ.
   ನಾನು ಶಾಲೆಯ ಮುಖ್ಯಸ್ಥರನ್ನು ಕೇಳಿದೆ.ಇಲ್ಲಿಯ ವರೆಗೂ ಈ ದಾಖಲಾತಿ ಯಾಕೆ ತಾಯಾರಿಸಿಲ್ಲ.ಇಲ್ಲಿಯವರೆಗೆ ಇದನ್ನು ಯಾರೂ ಕೇಳಿಲ್ವಾ? ಅಂತ.
   ಅವರು ಹೇಳಿದರು.ಆ ದಾಖಲಾತಿಯ ಬಗ್ಗೆ ಕೆಲವು RTI ಅರ್ಜಿಗಳು ಬಂದಿದ್ದವು.ಕೆಲವು ಮಂತ್ರಿಗಳು ಕೂಡಾ ದಾಖಲಾತಿ ಕೇಳಿದ್ದರು.ಆದರೆ ಎಲ್ಲಿಯ ವರೆಗೆ ಮನೆಯವರು ದಾಖಲಾತಿ ಕೇಳುವುದಿಲ್ಲವೋ, ಅಲ್ಲಿಯ ವರೆಗೆ ನಾವು ಅದನ್ನು ತಯಾರು ಮಾಡುವುದಿಲ್ಲ.ಈಗ ನೀವು ದಾಖಲೆ ಕೇಳುತ್ತಿರುವ ಮೊಟ್ಟ ಮೊದಲ ವ್ಯಕ್ತಿ ಆಗಿದ್ದೀರಿ.
    ಇವತ್ತು 118 ವರ್ಷಗಳ ನಂತರ ಬಾಬಾಸಾಹೇಬರ school living certificate ಮಾಡಲಾಗಿದೆ.ಇದು ಎಲ್ಲರಿಗೂ ಗೊತ್ತಾಗಲಿ ಅಂತ ಹೇಳುತ್ತಿದ್ದೇನೆ.
  ವಿಶೇಷವಾಗಿ ಗೊತ್ತಾಗಿದ್ದು ಏನಂದ್ರೆ,ಬಾಬಾಸಾಹೇಬರಿಗಿಂತ 5 ವರ್ಷ ಮುಂಚೆ,ಆನಂದರಾವ್ ಅವರ ದಾಖಲಾತಿ 1885 ರಲ್ಲಿ ಆಗಿದೆ.ಅವರ ಹೆಸರು ರೆಜಿಸ್ಟರ್ ನಲ್ಲಿ ಆನಂದ್ ರಾಮಜಿ ಅಂಬೇಡ್ಕರ್ ಅಂತ ಇದೆ.ಇದರ ಕಾಪಿ ನನಗೆ ಬೇಗನೆ ಸಿಗುತ್ತದೆ.
   ಇದರ ಅರ್ಥ ಗೊತ್ತಾಯ್ತಾ? ಅಂಬೇಡ್ಕರ್ ಅನ್ನುವ ಅಡ್ಡ ಹೆಸರು ಯಾವ ಬ್ರಾಹ್ಮಣರು ಬಾಬಾಸಾಹೇಬರಿಗೆ ಕೊಟ್ಟಿದ್ದಲ್ಲ.ಒಂದು ವೇಳೆ ಕೊಟ್ಟಿದ್ದೆ ಆದಲ್ಲಿ 5 ವರ್ಷ ಮುಂಚಿನ ಆನಂದ್ ಹೆಸರಿನ ಮುಂದೆ ಅಂಬೇಡ್ಕರ್ ಅಂತ ಬರೀತಾ ಇರಲಿಲ್ಲ.ಬ್ರಾಹ್ಮಣ ಅಂಬೇಡ್ಕರ್ ಗುರುವಿನ ಸತ್ಯ ಎಷ್ಟಿದೆ ಅಂದ್ರೆ,ಮೌರ್ಯ ಕಾಲದಲ್ಲಿ ಚಾಣುಕ್ಯನ ರೀತಿ. ಅಂದ್ರೆ, ಅರ್ಥಾತ್ ಕಾಲ್ಪನಿಕ.
      ಅಂಬೇಡ್ಕರ್ ಹೆಸರು ಯಾವ ಬ್ರಾಹ್ಮಣರ ಕೊಡುಗೆ ಅಲ್ಲ.ಬಾಬಾಸಾಹೇಬ ಮತ್ತು ಆನಂದರಾವ್ ಅವರ ತಂದೆ ಸುಬೆದಾರ್ ಮೇಜರ್ ರಾಮಜಿ ಅವರ ಕೊಡುಗೆಯಾಗಿದೆ.

– ರಾಜ ರತ್ನ ಅಂಬೇಡ್ಕರ್
ದಯಾನಂದ ನಡಗೇರಿ.
ಜೈಭೀಮ್ ಜೈ ಸಂವಿಧಾನ್

Related posts

Leave a Comment