ಅಂತರಾಜ್ಯ ಕಳ್ಳರನ್ನು ಬಂಧಿಸಿದ ಮಾದನಾಯಕನಹಳ್ಳಿ ಪೊಲೀಸರು, ಬಂಧಿತರಿಂದ 75 ಲಕ್ಷ ಮೂಲ್ಯದ ಎಲೆಕ್ಟ್ರಾನಿಕ್‌ ಉತ್ಪನ್ನಗಳು ವಶಕ್ಕೆ – Digital Varthe

ನೆಲಮಂಗಲ: ಕೊಟ್ಯಾಂತರ ರುಪಾಯಿ ಮೌಲ್ಯದ ಕ್ಯಾಮೆರಾ, ಲ್ಯಾಪ್‌ ಟಾಪ್‌ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನ‌ ಕಳ್ಳತನ್‌ ಮಾಡಿದ್ದ ಏಳು ಜನ ಆರೋಪಿಗಳಲ್ಲಿ ಐದು ಜನರನ್ನ ಬಂಧಿಸಿದ್ದು ಇನ್ನು ಇಬ್ಬರಿಗಾಗಿ ಶೋಧ ಮಾಡಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪತ್ರಿಕಾಗೋಷಗಠಿಯಲ್ಲಿ ತಿಳಿಸಿದ್ದಾರೆ

ಪ್ರಸಿದ್ಧ ಅಂತರ ರಾಷ್ಟ್ರೀಯ ಕಂಪನಿಗಳ ವೇರ್‌ಹೌಸ್ ಹಾಗೂ ಗೋಡನ್‌ಗಳ ಕಳ್ಳತನ ಮಾಡುತ್ತಿದ್ದ ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿ 75ಲಕ್ಷ ಮೌಲ್ಯದ ವಸ್ತುಗಳನ್ನು ಮಾದನಾಯಕನಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ಸೋಮವಾರ ಸಂಜೆ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಘಟನೆ ಹಿನ್ನಲೆ: ಕಳೆದ 2023ರ ಫೆ.19ರಂದು ಬೆಂಗಳೂರು ಉತ್ತರ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬಳಿಯ ಪ್ಯಾನಸೋನಿಕ್ ಇಂಡಿಯಾ ಪ್ರೈ.ಲಿ. ಗೋಡನ್‌ನಲ್ಲಿ ರಾತ್ರಿ ವೇಳೆ ದುಷ್ಕರ್ಮಿಗಳು ವೇರ್‌ಹೌಸ್ ಶೀಟ್‌ಗಳನ್ನು ಕಿತ್ತು ಒಳಗೆ ಬಂದು ಸುಮಾರು 69.2 ಲಕ್ಷಮೌಲ್ಯದ ಲ್ಯಾಪ್‌ಟ್ಯಾಫ್, ಹೆಡ್‌ಫೋನ್, ಎಲ್‌ಇಡಿ ಟಿವಿ, ಎಲ್‌ಸಿಡಿ ಪ್ಯಾನೆಲ್, ಬ್ಯಾಟಿಕೇರ್ ಉಪಕರಣಗಳನ್ನು ಕದ್ದು ಪರಾರಿಯಾಗಿದ್ದು ಫೆ.೨೦ರಂದು ಬೆಳಗ್ಗೆ ಕಂಪನಿಯ ರಾಮಕೃಷ್ಣಯ್ಯ ಎಂಬಾತ ನೀಡಿದರು. ಜತೆಗೆ ಮಾ.೨೬ರಂದು ರಾತ್ರಿ ಬೆಂಗಳೂರು ಉತ್ತರ ತಾಲೂಕಿಮ ಹೆಗ್ಗಡದೇವನಪುರದ ಸೋನಿ ಇಂಡಿಯಾ ಪ್ರೈ.ಲಿ. ಗೋಡಾನ್‌ನಲ್ಲಿ ದುಷ್ಕರ್ಮಿಗಳು ಅದೇ ರೀತಿ ವೇರ್‌ಹೌಸ್ ಶೀಟ್‌ಗಳನ್ನು ಕಿತ್ತು ಒಳಗೆ ಬಂದು ಸುಮಾರು 1.9 ಕೋಟಿ ಮೌಳ್ಯದ ಕ್ಯಾಮೆರಾ, ಲೈನ್ಸ್, ಬ್ಲೂಟೂತ್, ವಾಯ್ಸ್ ರೆಕಾರ್ಡರ್, ನೋಕಿಯಾ ಕಂಪನಿ ಪೊನ್, ಹೆಡ್‌ಸೆಟ್, ಮೊಮೋರಿ ಕಾರ್ಡ್ ಕಳ್ಳತನವಾಗಿದ್ದು ಮಾ.೨೭ರಂದು ಮ್ಯಾನೇಜರ್ ಹರ್ಷ ಮಾದನಾಯನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.

ಉತ್ತರ ಪ್ರದೇಶ ರಾಜ್ಯದ ಚೌನ್‌ಪುರ್ ಜಿಲ್ಲೆಯ ಪರ್ಮಾಲ್‌ಪಟ್ಟಿ ಗ್ರಾಮದ ನಿವಾಸಿ ಪ್ರವೀಣ್‌ಪಟೇಲ್(29), ಸುಂಗುಲ್‌ಪುರ್ ಗ್ರಾಮದ ನಿವಾಸಿ ಸಂದೀಪ್ (28), ಆಕಾಶ್‌ಪಟೇಲ್(22) ಪಸಿಯಾಯಿಖುರ್ದು ಗ್ರಾಮದ ನಿವಾಸಿ ನಿರ್ಭಯ್‌ಕುಮಾರ್(20), ವಾರಣಾಸಿ ಜಿಲ್ಲೆಯ ಸರಾಯ್‌ತಕ್ಕಿ ಗ್ರಾಮದ ನಿವಾಸಿ ರಾಜನ್‌ರಾಯ್ (26) ಬಂಧಿತರು. ಉತ್ತರ ಪ್ರದೇಶದ ಚೌನ್‌ಪುರ್ ಜಿಲ್ಲೆಯ ಪರ್ಮಾಲ್‌ಪಟ್ಟಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ೭೫ಲಕ್ಷ ಮೌಲ್ಯದ ಕ್ಯಾಮೆರಾ, ಲ್ಯಾಪ್‌ಟಾಪ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಮಾಹಿತಿ ನೀಡಿದರು.

ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ಬಂಧಿಸಿದ್ದ ವಸ್ತುಗಳನ್ನು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್‌ಬಾಲದಂಡಿ ವೀಕ್ಷಿಸಿದರು.

ಸುಳಿವು ನೀಡಿದ್ದ ಸಿಸಿ ಕ್ಯಾಮೆರಾ: ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಬಿ.ಎಸ್.ಮಂಜುನಾಥ್ ನೇತೃತ್ವದ ಸಿಬ್ಬಂದಿಗಳ ತಂಡ ಸಿಸಿಕ್ಯಾಮೆರಾ ಪರಿಶೀಲನೆ, ಟವರ್ ಡಂಪ್ ಹಾಗೂ ಮೊಬೈಲ್ ಸಿಮ್ ಸಿಡಿಆರ್ ಪಡೆದುಕೊಂಡು ಆರೋಪಿಗಳ ಚಲನವಲನವನ್ನು ಸಂಗ್ರಹಿಸಿ ಸತತ ಮೂರು ತಿಂಗಳ ಪ್ರಯತ್ನದಿಂದ ೫ ಮಂದಿ ಆಂತರ್ ರಾಜ್ಯ ಕಳ್ಳರನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್‌ಬಾಲದಂಡಿ ತಿಳಿಸಿದರು.

ಗೂಗಲ್‌ನಲ್ಲಿ ಸರ್ಚ್: ಆರೋಪಿಗಳು ಬೆಂಗಳೂರಿನಲ್ಲಿರು ಅಂತರಾಷ್ಟ್ರೀಯ ಬ್ರಾಂಡೆಡ್ ಕಂಪನಿಗಳ ಗೋಡನ್‌ಗಳನ್ನು ಗೂಗಲ್ ಮುಖಾಂತರ ಸರ್ಚ್ ಮಾಡಿ ಪ್ರಖ್ಯಾತ ಸೋನಿ ಮತ್ತು ಪ್ಯಾನಸೋನಿಕ್ ಕಂಪನಿ ಗೋಡನ್ ಮತ್ತು ವೇರ್ ಹೌಸ್‌ಗಳನ್ನು ಕಳವು ಮಾಡಲು ಗುರುತಿಸಿಕೊಂಡು ಕಳವು ಮಾಡುವ ೨ ದಿನ ಮುಂಚೆಯೇ ಗೋಡನ್ ಬಳಿ ತೆರಳಿ ಯಾವುದೇ ಕುರುಹು ಸಿಗದಂತೆ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು. ಬಂಧತ ಆರೋಪಿಗಳ ಮೇಲೆ ಮಾದನಾಯಕನಹಳ್ಳಿ ೨ ಪ್ರಕರಣ ಹಾಗೂ ಮುಬೈ ನಲ್ಲಿ ಒಂದು ಕಳ್ಳತನ ಪ್ರಕರಣ ಭಾಗಿಯಾಗಿದ್ದು ಬೆಳಕಿಗೆ ಬಂದಿದೆ ಎಂದು ಗ್ರಾಮಾಂತರ ಜಿಲ್ಲಾ ಎಸ್ಪಿ ಮಾಹಿತಿ ನೀಡಿದರು.

ವರಿಷ್ಠಾಧಿಕಾರಿ ಶ್ಲಾಘನೆ: ಡಿ.ವೈಎಸ್‌ಪಿ ಗೌತಮ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ಎಸ್‌ಐ ಪ್ರಶಾಂತ್, ಸಿಬ್ಬಂದಿ ಚಂದ್ರ, ನರೇಶ್‌ಕುಮಾರ್, ಅರುಣ್‌ಗೌಡ, ರವಿಕುಮಾರ್, ಪೈರೋಜ್, ಪರ್ವೀಸ್‌ಪಾಷ, ಹಾಜಿಮಲಂಗ ಇನಾಮ್‌ದಾರ್, ಮೋಹನ್, ನಾಗೇಶ್, ಗಂಗಾಧರ್, ಉಮೇಶ್ ಒಳಗೊಂಡ ತಂಡ ಪ್ರಕರಣಗಳನ್ನು ಬೇಧಿಸಿ ವಸ್ತುಗಳನ್ನು ವಶÀಪಡಿಸಿಕೊಂಡಿದ್ದು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿ ವಿಶೇಷ ತಂಡಕ್ಕೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು.

ಸಂದರ್ಭದಲ್ಲಿ ಗ್ರಾಮಾಂತರ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಡಿವೈಎಸ್‌ಪಿ ಗೌತಮ್, ಇನ್ಸ್ಪೆಕ್ಟರ್ ಬಿ.ಎಸ್.ಮಂಜುನಾಥ್, ಮತ್ತಿತರರು ಉಪಸ್ಥಿರಿದರು.

Related posts

Leave a Comment